ADVERTISEMENT

ಅಂಚೆ ಮತದಾನದಲ್ಲೂ ಮುಂದು, ನೋಟಾಕ್ಕೂ ಬೆಂಬಲ

ಕೊಪ್ಪಳ ಲೋಕಸಭೆ ಚುನಾವಣೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 23 ಮೇ 2019, 14:01 IST
Last Updated 23 ಮೇ 2019, 14:01 IST
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿನ ಗುರುವಾರ ಮತ ಎಣಿಕೆ ಕೇಂದ್ರಗಳಲ್ಲಿ ಓಡಾಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಗಮನ ಸೆಳೆದರು
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿನ ಗುರುವಾರ ಮತ ಎಣಿಕೆ ಕೇಂದ್ರಗಳಲ್ಲಿ ಓಡಾಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಗಮನ ಸೆಳೆದರು   

ಕೊಪ್ಪಳ: ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ಇಲ್ಲಿನ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 8ಕ್ಕೆ ಆರಂಭಗೊಂಡಿತು. ಮೊದಲ ಸುತ್ತಿನಿಂದ 21ನೇ ಸುತ್ತಿನವರೆಗೆ ಸತತ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 5,86,783 ಮತ ಪಡೆದು ಗೆಲುವಿನ ನಗೆ ಬೀರಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ 5,48,386ಮತ ಪಡೆದು 38,397 ಮತಗಳ ಅಂತರದಿಂದ ಸೋಲು ಕಂಡರು.

ವಿಧಾನ ಸಭಾಕ್ಷೇತ್ರವಾರು ಫಲಿತಾಂಶ: ಸಂಗಣ್ಣ ಕರಡಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ71,441, ಮಸ್ಕಿ-64,538, ಕುಷ್ಟಗಿ-72,474, ಕನಕಗಿರಿ-77,059, ಗಂಗಾವತಿ-70,287, ಯಲಬುರ್ಗಾ-76,621, ಕೊಪ್ಪಳ-91,124, ಸಿರಗುಪ್ಪ-61,453 ಸೇರಿ ಒಟ್ಟು 5,86,783 ಮತಗಳನ್ನು ಪಡೆದಿದ್ದಾರೆ.

ADVERTISEMENT

ಹಿಟ್ನಾಳ ಪಡೆದ ಮತ: ಸಿಂಧನೂರ- 71,361, ಮಸ್ಕಿ-52,467, ಕುಷ್ಟಗಿ-64,649, ಕನಕಗಿರಿ-69,763, ಗಂಗಾವತಿ-67,751, ಯಲಬುರ್ಗಾ-68,549, ಕೊಪ್ಪಳ-79,446, ಸಿರಗುಪ್ಪ- 73,587 ಸೇರಿ ಒಟ್ಟು 5,47,573 ಮತಗಳನ್ನು ಪಡೆದಿದ್ದಾರೆ.

ಅಂಚೆ ಮತಗಳ ವಿವರ: ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 1,786, ರಾಜಶೇಖರ ಹಿಟ್ನಾಳ 813 ಮತ ಪಡೆದಿದ್ದಾರೆ.

ನೋಟಾ ಮತಗಳು: ಅಂಚೆ ಮತಪತ್ರ ಸೇರಿದಂತೆ 10,813 ನೋಟಾ ಮತಗಳು ಚಲಾವಣೆಯಾಗಿವೆ.

ಮತಗಟ್ಟೆ ಹಾಗೂ ಎಣಿಕಾ ಸುತ್ತು: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2.033 ಮತಗಟ್ಟೆ ಸ್ಥಾಪಿಸಲಾಗಿತ್ತು. 21 ಸುತ್ತಗಳ ಮತ ಎಣಿಕಾ ಕಾರ್ಯ ನಡೆದು ಕೊನೆಗೆ ಫಲಿತಾಂಶ ಘೋಷಿಸಲಾಯಿತು.

ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದೇ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತ ಎಣಿಕೆನಡೆಯಿತು. ಸಾರ್ವಜನಿಕರಿಗೆ ಮತ ಎಣಿಕೆಯ ಎಲ್ಲ ಹಂತದ ಮಾಹಿತಿಯನ್ನು ಸಹ ಧ್ವನಿವರ್ಧಕ, ಎಲ್‌ಇಡಿ ಮೂಲಕ ಪ್ರದರ್ಶನ ಮಾಡಲಾಯಿತು.

ಕುಸಿದು ಬಿದ್ದ ಚುನಾವಣೆ ಸಿಬ್ಬಂದಿ:

ಮತ ಎಣಿಕೆ ವೇಳೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದ ಜಿಲ್ಲಾ ಆಡಳಿತ ಭವನದಲ್ಲಿಪಿಜಿಬಿ ಬ್ಯಾಂಕಿನಕ್ಯಾಷಿಯರ್ ಶಿವಕುಮಾರ್ ಎಂಬುವರು ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಪೊಲೀಸರುನಗು-ಮಗು ವಾಹನದ ಮೂಲಕ ಆಸ್ಪತ್ರೆಗೆಸಾಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.