ಕೊಪ್ಪಳ: ಮೂರು ದಶಕಗಳಿಂದ ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಹೊಂದಿರುವ ಕಾಂಗ್ರೆಸ್‌ನ ಹಿಟ್ನಾಳ ಕುಟುಂಬವನ್ನು ಎದುರಿಸುವ ಸವಾಲು ಬಿಜೆಪಿಯ ಹೊಸ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರ ಮುಂದಿದೆ.
ಕಾಂಗ್ರೆಸ್‌ನಿಂದ ರಾಜಶೇಖರ ಹಿಟ್ನಾಳ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಹಿಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಕುರುಬ ಸಮುದಾಯದ ರಾಜಶೇಖರ ಅವರ ತಂದೆ ಬಸವರಾಜ ಹಿಟ್ನಾಳ 2004ರಲ್ಲಿ ಶಾಸಕರಾಗಿದ್ದರು. ಇದಕ್ಕೂ ಹತ್ತು ವರ್ಷಗಳ ಹಿಂದೆ ಚುನಾವಣೆ ಎದುರಿಸಿದ್ದರು. 2014ರ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿ ಸೋತಿದ್ದರು. ರಾಜಶೇಖರ ಅವರ ಸಹೋದರ ರಾಘವೇಂದ್ರ ಹಿಟ್ನಾಳ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಪ್ರತಿ ಚುನಾವಣೆಯಲ್ಲಿ ಹಿಟ್ನಾಳ ಕುಟುಂಬದ ಸ್ಪರ್ಧೆ ಇದ್ದೇ ಇದೆ.
ಇದಕ್ಕೆ ಸರಿಸಾಟಿ ಎನ್ನುವಂತೆ ಕರಡಿ ಕುಟುಂಬವೂ ಪ್ರಾಬಲ್ಯ ಸಾಧಿಸಿಕೊಂಡು ಬಂದಿತ್ತು. ಈ ಕುಟುಂಬದ ಸಂಗಣ್ಣ ಕರಡಿ ನಾಲ್ಕು ಬಾರಿ ಶಾಸಕರಾಗಿ, ಹಿಂದಿನ ಎರಡೂ ಬಾರಿ ಬಿಜೆಪಿಯಿಂದ ಸಂಸದರಾಗಿದ್ದಾರೆ. ಆದರೆ, ಈ ಬಾರಿ ಪಕ್ಷ ಸಂಗಣ್ಣ ಬದಲು ವೈದ್ಯ ಬಸವರಾಜ ಅವರಿಗೆ ಟಿಕೆಟ್ ನೀಡಿದೆ.
ಪಂಚಮಸಾಲಿ ಸಮುದಾಯದ ಬಸವರಾಜ ಕುಟುಂಬಕ್ಕೆ ರಾಜಕಾರಣ ಹೊಸದೇನಲ್ಲ. ಅವರ ತಂದೆ ಕೆ. ಶರಣಪ್ಪ ಕುಷ್ಟಗಿ ಕ್ಷೇತ್ರದಿಂದ ಶಾಸಕರಾಗಿದ್ದರು. ಇವರ ಸಹೋದರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಆದರೆ, ನೇರವಾಗಿ ಎದುರಿಸುತ್ತಿರುವ ಮೊದಲ ಚುನಾವಣೆಯಿದು. ಬಿಜೆಪಿಗೆ ಸಂಗಣ್ಣ ಅವರ ತಟಸ್ಥ ನೀತಿ ಮತ್ತು ಕಾಂಗ್ರೆಸ್‌ಗೆ ಗಂಗಾವತಿ ಕ್ಷೇತ್ರದಲ್ಲಿನ ಬಂಡಾಯ ತಲೆನೋವಾಗಿದೆ.
ಅಭ್ಯರ್ಥಿಗಳು
ಕೆ. ರಾಜಶೇಖರ ಹಿಟ್ನಾಳ (ಕಾಂಗ್ರೆಸ್)
ಡಾ.ಬಸವರಾಜ ಕ್ಯಾವಟರ್ (ಬಿಜೆಪಿ)
ಕಾಂಗ್ರೆಸ್ 6
ಬಿಜೆಪಿ 2
ಪುರುಷರು: 9,08,756
ಮಹಿಳೆಯರು: 9,32,680
ಲಿಂಗತ್ವ ಅಲ್ಪಸಂಖ್ಯಾತರು:124
ಒಟ್ಟು: 18,41,560
2019;ಹೆಸರು;ಪಕ್ಷ;ಪಡೆದ ಮತಗಳು
ಗೆದ್ದವರು;ಸಂಗಣ್ಣ ಕರಡಿ;ಬಿಜೆಪಿ;5,86,783
ಸಮೀಪದ ಪ್ರತಿಸ್ಪರ್ಧಿ;ಕೆ. ರಾಜಶೇಖರ ಹಿಟ್ನಾಳ;ಕಾಂಗ್ರೆಸ್;5,48,386
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.