ADVERTISEMENT

ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದಿಂದ ಶಿವರಾತ್ರಿ ಆಚರಣೆ: ಶಿವನಾಮ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:39 IST
Last Updated 16 ಫೆಬ್ರುವರಿ 2026, 6:39 IST
<div class="paragraphs"><p>ಕುಷ್ಟಗಿ ಸಮೀಪದ ಶಾಖಾಪುರ ಸೀಮಾಂತರದ ಅಮರನಾಥೇಶ್ವರ ಆಶ್ರಮದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು</p></div>

ಕುಷ್ಟಗಿ ಸಮೀಪದ ಶಾಖಾಪುರ ಸೀಮಾಂತರದ ಅಮರನಾಥೇಶ್ವರ ಆಶ್ರಮದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು

   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿಯನ್ನು ಶ್ರದ್ಧೆ, ಭಕ್ತಿಯೊಂದಿಗೆ ಆಚರಿಸಲಾಯಿತು. ಶಿವದೇವಾಲಯಗಳನ್ನು ತಳಿರು ತೋರಣ, ಬಣ್ಣದ ರಂಗೋಲಿ, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.

ಭಾನುವಾರ ಸಂಜೆಯಿಂದ ವಿವಿಧ ಶಿವದೇವಾಲಯಗಳಲ್ಲಿ ಜಾಗರಣೆ ನಿಮಿತ್ತ ಅಹೋರಾತ್ರಿ ಶಿವನಾಮ ಸಂಕೀರ್ತನೆ ನಡೆಯಿತು. ವಿಶೇಷ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ ಮತ್ತಿತರೆ ಧಾರ್ಮಿಕ ಆಚರಣೆಗಳು ನಡೆದವು. ಪಟ್ಟಣದ ಪುರಾತನ ರಾಮಲಿಂಗೇಶ್ವರ ದೇವಸ್ಥಾನದ ಗೋಪುರದ ಕಲಶದ ಮೆರವಣಿಗೆ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜೆ ನೆರವೇರಿಸಿ ಸಂಜೆ ದೀಪೋತ್ಸವ ನಡೆಸಲಾಯಿತು. ವಿವಿಧ ಗ್ರಾಮಗಳಲ್ಲಿ ಇಡಿ ರಾತ್ರಿ ಶಿವರಾತ್ರಿ ಮಹಿಮೆ ಕುರಿತ ಪುರಾಣ, ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ADVERTISEMENT

ಮಹಾಶಿವರಾತ್ರಿ ನಿಮಿತ್ತ ಶಿವಲಿಂಗ ದರ್ಶನ ಹಾಗೂ ಪೂಜೆ ಸಲ್ಲಿಸಲು ಸಾಕಷ್ಟು ಸಂಖ್ಯೆ ಭಕ್ತರು ನೆರೆದಿದ್ದರು.

ಮದ್ದಾನೇಶ್ವರ ಹಿರೇಮಠ, ನಿಡಶೇಸಿ ಪಶ್ಚಕಂಥಿ ಹಿರೇಮಠ, ಗುಮಗೇರಿಯ ಓಂಕಾರೇಶ್ವರ, ಮುದೇನೂರಿನಲ್ಲಿ ಉಮಾಮಹೇಶ್ವರ, ಪಟ್ಟಣದ ವಾಸವಿ ದೇವಸ್ಥಾನ ಮತ್ತಿತರೆ ದೇವಾಲಯಗಳಲ್ಲಿ ಶಿವಪೂಜೆ, ಶಿವನಾಮ ಸಂಕೀರ್ತನೆ ಮೊದಲಾದ ಧಾರ್ಮಿಕ ಆಚರಣೆಗಳು ನಡೆದವು. ಶಾಖಾಪುರ ಸೀಮಾಂತರದ ಅಮರನಾಥೇಶ್ವರ ಆಶ್ರಮದಲ್ಲಿಯೂ ಶಿವಲಿಂಗಕ್ಕೆ ವಿಶೇಷ ಅಭಿಷೇಕ ನೆರವೇರಿತು.

ಈಶ್ವರೀಯ ವಿದ್ಯಾಲಯದಲ್ಲಿ ಶಿವರಾತ್ರಿ ಸಂಭ್ರಮ

ಯಲಬುರ್ಗಾ: ‘ಶಿವ ಹಾಗೂ ಶಕ್ತಿಯ ಸಮ್ಮೀಲನವೇ ಶಿವರಾತ್ರಿ. ಉಪವಾಸದ ಜೊತೆಗೆ ಶಿವನ ಧ್ಯಾನದಲ್ಲಿ ತೊಡಗಿದರೆ ನಮ್ಮ ಪಾಪಗಳು ಕಳೆದು ಪುಣ್ಯಪ್ರಾಪ್ತಿಯಾಗುತ್ತದೆ’ ಎಂದು ಸ್ಥಳೀಯ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬಿ.ಕೆ ಗೀತ ಹೇಳಿದರು.

ಪಟ್ಟಣದಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ ವಿಶೇಷ ಉಪನ್ಯಾಸ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೆರವಣಿಗೆ: ಬೆಳಿಗ್ಗೆ ಶಿವಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ ಭೂತೆ, ಪಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ ಹಾಗೂ ಇತರರು ಪಾಲ್ಗೊಂಡಿದ್ದರು. ಸಿದ್ದಯ್ಯ ಕೊಣ್ಣೂರು, ಸಂಗಣ್ಣ ಟೆಂಗಿನಕಾಯಿ, ಸಂಗಣ್ಣ ಕರಂಡಿ, ಮಲ್ಲಿಕಾರ್ಜುನ ತೊಂಡಿಹಾಳ, ಫಕೀರಪ್ಪ ಗಾಣಗೇರ, ವೀರಯ್ಯ ಹಿರೇಮಠ, ನಿಂಗಪ್ಪ ಯರಾಶಿ, ಕನಕಪ್ಪ ಕಂಬಳಿ ಜಗದೀಶ ಅಂಗಡಿ, ರುದ್ರಗೌಡ ಗೋಣಿ, ವೀರನಗೌಡ ಪಾಟೀಲ, ಆದೇಶ ಹುಬ್ಬಳ್ಳಿ, ಬಸನಗೌಡ ಪಾಟೀಲ, ಶರಣಪ್ಪ ದಾನಕೈ, ಶಿವು ಎಚ್, ಮಂಜು ಕೊಣ್ಣೂರು ಇದ್ದರು.

‘ನಿಷ್ಠೆಯಿಂದ ದೇವರ ಸ್ಮರಿಸುವುದು ಇಷ್ಟಲಿಂಗ’

ಗಂಗಾವತಿ: ‘ಶಿವನನ್ನು ಮನಸ್ಪೂರ್ತಿಯಾಗಿ ಇಷ್ಟಪಟ್ಟು, ನಿಷ್ಠೆಯಿಂದ ಪೂಜೆ ಮಾಡುವುದೇ ಇಷ್ಟಲಿಂಗ’ ಎಂದು ಹೊಸಪೇಟೆ ಪುಣ್ಯಕೋಟಿ ಫೌಂಡೇಶನ್ ಮುಖ್ಯಸ್ಥ ಹಾಗೂ ಇಷ್ಟಲಿಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಅಜಯಕುಮಾರ ತಾಂಡೂರ್ ಹೇಳಿದರು.

ನಗರದ ಕೊಟ್ಟೂರು ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ಸಮಿತಿ, ಬಸವಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ನಡೆದ ಇಷ್ಟಲಿಂಗ ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಧ್ಯಯನ ಕೇಂದ್ರದದ ನಿರ್ದೇಶಕ ಟಿ.ಎಚ್ ಬಸವರಾಜ, ಪದ್ಮಾಕ್ಷರಯ್ಯ ಮಾತನಾಡಿದರು. ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ವೀರೇಶ ರಡ್ಡಿ ಇವರಿಂದ ವಚನಮಂಗಲ ಕಾರ್ಯಕ್ರಮ ಮುಕ್ತಾಯವಾಯಿತು.

ರಾಷ್ಟ್ರೀಯ ಬಸವದಳದವರು ಬಸವಮಂಟಪದಲ್ಲಿ ಶಿವರಾತ್ರಿ ನಿಮಿತ್ತ ಗಣಮೇಳ ಕಾರ್ಯಕ್ರಮ ನಡೆಸಿಕೊಟ್ಟರು. 

ಹೊಸಪೇಟೆ ಸಿದ್ದಲಿಂಗೇಶ್ವರ.ಕೆ, ಎಚ್.ಬಸವರಾಜ, ಜಿ.ವಿನಾಯಕ, ಪಂಪಣ್ಣ ಕಿನ್ನಾಳ, ವಿಜಯಲಕ್ಷ್ಮಿ ನಾರಿನಾಳ, ಚ ನ್ನಬಸಮ್ಮ ಕಂಪ್ಲಿ, ರಾಷ್ಟ್ರೀಯ ಬಸವದಳ ಅಧ್ಯಕ್ಷ ದಿಲೀಪ ಕುಮಾರ ವಂದಾಲ, ಬಸವಕೇಂದ್ರದ ಅಧ್ಯಕ್ಷ ಕೆ.ಬಸವರಾಜ, ರುದ್ರಪ್ಪಗಾಳಿ, ಎ.ಕೆ.ಮಹೇಶಕುಮಾರ, ಎಫ್. ಷಣ್ಮುಖಪ್ಪ, ಕೆ.ಕಾಳಪ್ಪ, ಶೇಖರಪ್ಪ ಅರಳಿ, ಡಿ.ಜಿ.ಮಠದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.