ADVERTISEMENT

ಕನಕಗಿರಿ | ರಸ್ತೆ ಅಪಘಾತ: ಕರವಸೂಲಿಗಾರ ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:11 IST
Last Updated 30 ಜುಲೈ 2024, 14:11 IST
ವಿಜಯಕುಮಾರ್‌ ಪಾಟೀಲ
ವಿಜಯಕುಮಾರ್‌ ಪಾಟೀಲ   

ಕನಕಗಿರಿ: ಸಮೀಪದ ಗೌರಿಪುರ ಗ್ರಾಮ ಪಂಚಾಯಿತಿ ಕರ ವಸೂಲಿಗಾರ ವಿಜಯಕುಮಾರ ಪೊಲೀಸ್‌ಪಾಟೀಲ (37) ಸೋಮವಾರ ರಾತ್ರಿ ಅಪಘಾತದಲ್ಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಸ್ವಗ್ರಾಮ ಗೌರಿಪುರದಿಂದ ವೈಯಕ್ತಿಕ ಕೆಲಸದ ನಿಮಿತ್ತ ಕಾರಿನಲ್ಲಿ ಪಟ್ಟಣಕ್ಕೆ ಬರುತ್ತಿರುವಾಗ ಪ್ರವಾಸಿ ಮಂದಿರದ ರಸ್ತೆಯ ಬಳಿ ಅಪಘಾತ ಸಂಭವಿಸಿದ್ದು, ಪಟ್ಟಣದ ರಸ್ತೆ ಮೂಲಕ ಹುಲ್ಲು ತುಂಬಿಕೊಂಡು ಹೊರಟಿದ್ದ ಟ್ಯ್ರಾಕ್ಟರ್, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪಿಐ ಎಂ.ಡಿ.‌ಫೈಜುಲ್ಲಾ ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಶಂಕರ ಕುರಿ (ಉದಯಶಂಕರ) ಅವರನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ದ್ಯಾಮಣ್ಣ ಹನುಮಂತಪ್ಪ ಬೊಮ್ಮನಾಳ, ಕೃಷ್ಣ ಯಲ್ಲಪ್ಪ ಬೋವಿ ಹಾಗೂ ರಾಮನಗೌಡ ದ್ಯಾಮಪ್ಪ ಪಾಟೀಲ ಅವರು ಗಾಯಗೊಂಡಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.