ADVERTISEMENT

‘ಶಾಶ್ವತ ನೀರಾವರಿ ಯೋಜನೆಗೆ ಆದ್ಯತೆ’

₹4 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಾಸಕ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 15:16 IST
Last Updated 16 ಡಿಸೆಂಬರ್ 2019, 15:16 IST
ಕೊಪ್ಪಳದ ಹಳೆಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸೋಮವಾರ ಶಾಸಕ ರಾಘವೇಂದ್ರ ಕೆ ಹಿಟ್ನಾಳ 1.83 ಕೋಟಿ ವೆಚ್ಚದ. ಪಶು ವೈದ್ಯ ಪಾಲಿ ಕ್ಲಿನಿಕ್ ಕಟ್ಟಡಕ್ಕೆ ಭೂಮಿ ಪೂಜೆ ನೆರೆವೇರಿಸಿದರು
ಕೊಪ್ಪಳದ ಹಳೆಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸೋಮವಾರ ಶಾಸಕ ರಾಘವೇಂದ್ರ ಕೆ ಹಿಟ್ನಾಳ 1.83 ಕೋಟಿ ವೆಚ್ಚದ. ಪಶು ವೈದ್ಯ ಪಾಲಿ ಕ್ಲಿನಿಕ್ ಕಟ್ಟಡಕ್ಕೆ ಭೂಮಿ ಪೂಜೆ ನೆರೆವೇರಿಸಿದರು   

ಕೊಪ್ಪಳ: ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು,ಶಾಶ್ವತ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಹಳೆಯ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ₹1.83 ಕೋಟಿ ವೆಚ್ಚದ ಪಶು ವೈದ್ಯ ಪಾಲಿ ಕ್ಲಿನಿಕ್ ಕಟ್ಟಡಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ತಾಯಿ-ಮಗು ಆಸ್ಪತ್ರೆ, ಸಾವಿರ ಹಾಸಿಗೆಗಳ ಆಸ್ಪತ್ರೆ ಶೀಘ್ರ ಆರಂಭಿಸಲಾಗುವುದು. ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ADVERTISEMENT

ಪಶು ವೈದ್ಯಕೀಯ ವಿಭಾಗವನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಅಗತ್ಯ ಅನುದಾನ ನೀಡಲಾಗುವುದು. ರೈತರ ನೆರವಿಗೆ ಇಲಾಖೆ ಧಾವಿಸಬೇಕು. ಜಾನುವಾರುಗಳಿಗೆ ಲಸಿಕೆ, ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ಹೇಳಿದರು.

ಏಳು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ತುಂತುರು ನೀರಾವರಿ ಪದ್ಧತಿ ಅನುಷ್ಠಾನಗೊಳಿಸಿದ್ದು, ಶೀಘ್ರವೇ ಸಿಂಗಟಾಲೂರ ಏತ ನೀರಾವರಿಯ ಕಾಲುವೆಮೂಲಕ ₹22 ಕೋಟಿ ವೆಚ್ಚದಲ್ಲಿ ಅಳವಂಡಿ ಭಾಗದ 9 ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.

ಕೃಷಿ ಹೊಂಡಗಳ ನಿರ್ಮಾಣದಿಂದ ಒಣ ಬೇಸಾಯಕ್ಕೆ ಹೆಚ್ಚು ಅನೂಕೂಲವಾಗಿದೆ.ಸರ್ಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ರೈತರಿಗೆ ಅನುಕೂಲವಾಗುವ ಕೃಷಿ ಸಲಕರಣೆಗಳು, ಬೀಜ ಗೊಬ್ಬರಗಳ ಮೇಲೆ ಅಧಿಕಸಬ್ಸಿಡಿ ಕೊಡಬೇಕು. ಗ್ರಾಮಗಳ ಸ್ವಚ್ಛತೆಗೆ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡು ಮಾರಕ ರೋಗಗಳಿಂದ ಗ್ರಾಮಗಳನ್ನು ಮುಕ್ತಗೊಳಿಸುವುದು ಪ್ರತಿಯೊಬ್ಬ ಗ್ರಾಮಸ್ಥರಆದ್ಯ ಕರ್ತವ್ಯವಾಗಿದೆ ಎಂದರು.

ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ₹2.50ಕೋಟಿ ವೆಚ್ಚದ ಸಿ.ಸಿ ರಸ್ತೆ, ಶಾಲಾ ಕಟ್ಟಡ, ಚರಂಡಿ, ಅಂಬೇಡ್ಕರ್ ಭವನ, ಕೆರೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಹಿಟ್ನಾಳ ಇದೇ ಸಂದರ್ಭದಲ್ಲಿ ನೆರವೇರಿಸಿದರು.

ಜಿಲ್ಲಾ ಪಂಚಾಯಿತಿಸದಸ್ಯ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ, ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ,ರಾಬಕೋ ನಿರ್ದೇಶಕ ವೆಂಕನಗೌಡ ಹಿರೇಗೌಡ್ರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಅಜೀಮ್ ಅತ್ತಾರ, ಗುರುರಾಜ ಹಲಗೇರಿ, ಅಕ್ಬರಪಾಷಾ ಪಲ್ಟನ್, ಮುಖಂಡರಾದಭರಮಪ್ಪ ನಗರ, ವೆಂಕಟೇಶ ಕಂಪಸಾಗರ, ಪ್ರಸನ್ನ ಗಡಾದ, ಗಾಳೆಪ್ಪ ಪೂಜಾರ, ಕೃಷ್ಣ ಗಲಬಿ, ನವೋದಯ ವಿರುಪಣ್ಣ, ವೆಂಕಣ್ಣ ಹೊರಕನಾಳ, ಮೈನುಸಾಬ್ ಮುಲ್ಲಾ, ತೋಟಪ್ಪ ಸಿಂಟ್ರ, ಅನ್ವರ್ ಗಡಾದ, ನಜೀರ್ ಅಳವಂಡಿ, ಗುರುಬಸವರಾಜ ಹಳ್ಳಿಕೇರಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.