
ಕೊಪ್ಪಳದಲ್ಲಿ ಬುಧವಾರ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ ನಡೆಯಿತು
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ನಾಲ್ಕು ವರ್ಷಗಳಿಂದ ಬಂದ್ ಆಗಿರುವ ಮೌನೇಶ್ವರ ದೇವಸ್ಥಾನದ ಬಾಗಿಲು ತೆರೆಯಿಸಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ವಿಶ್ವಕರ್ಮ ಸಮಾಜದ ಆರಾಧ್ಯ ದೈವ ಮೌನೇಶ್ವರ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಲಾಗಿದೆ. ಇದರಿಂದ ಯಾವುದೇ ಪೂಜಾ ಕಾರ್ಯಗಳು ನಡೆಯುತ್ತಿಲ್ಲ. ಪೂಜೆಯ ವಿಚಾರದಲ್ಲಿ ಇಬ್ಬರು ಪೂಜಾರಿಗಳ ನಡುವಿನ ಕಲಹ ನ್ಯಾಯಾಲಯದಲ್ಲಿದ್ದು, ಇದರಿಂದಾಗಿ ದೇವಸ್ಥಾನದಲ್ಲಿ ಕಾಲಕಾಲಕ್ಕೆ ನಡೆಯಬೇಕಾದ ಧಾರ್ಮಿಕ ಕಾರ್ಯಗಳು ನಿಂತು ಹೋಗಿವೆ. ಇದು ಸಮಾಜಕ್ಕೆ ತುಂಬಾ ನೋವುಂಟು ಮಾಡಿದೆ. ಇಬ್ಬರು ಪೂಜಾರಿಗಳ ನಡುವಿನ ಕಲಹಕ್ಕೆ ದೇವಸ್ಥಾನಕ್ಕೆ ಬೀಗ ಹಾಕುವುದು ಸರಿಯಲ್ಲ. ಇದು ಪ್ರಸಿದ್ಧ ದೇವಸ್ಥಾನವಾಗಿದೆ. ದೊಡ್ಡ ಇತಿಹಾಸ ಇದೆ ಎಂದರು.
ಮನವಿ ಸಲ್ಲಿಸುವ ವೇಳೆ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಕಂಸಾಲ, ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಡಿಗೇರ, ಪ್ರಧಾನ ಕಾರ್ಯದರ್ಶಿ ಎ.ಪ್ರಕಾಶ, ತಾಲ್ಲೂಕು ಅಧ್ಯಕ್ಷ ದೇವಪ್ಪ ಬಡಿಗೇರ, ಶಂಕ್ರಪ್ಪ ಬಡಿಗೇರ, ಕಾಳೇಶ ಬಡಿಗೇರ, ಸೂಗೂರೇಶ್ವರ ಅಕ್ಕಸಾಲಿ, ಶೇಖರಪ್ಪ ಬಡಿಗೇರ, ಪ್ರಭಾಕರ ಗುಡದಳ್ಳಿ, ಮಾರುತಿ ಬಡಿಗೇರ, ಶರಣಪ್ಪ ಬಡಿಗೇರ, ಮೌನೇಶ ವಡ್ಡಟ್ಟಿ, ಐ.ವಿ.ಪತ್ತಾರ, ದೇವೇಂದ್ರಪ್ಪ ಬಡಿಗೇರ, ಕಾಳಮ್ಮ ಪತ್ತಾರ, ಮಂಜುನಾಥ ಬಡಿಗೇರ, ಆನಂದ ವೇದಪಾಠಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.