ADVERTISEMENT

ಗಂಗಾವತಿ: ಮರಕುಂಬಿಯಲ್ಲಿ ನಡೆಯದ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:28 IST
Last Updated 7 ಜುಲೈ 2025, 5:28 IST
ಮರಕುಂಬಿ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಿಸಲಿಲ್ಲ
ಮರಕುಂಬಿ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಿಸಲಿಲ್ಲ   

ಗಂಗಾವತಿ: ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ಮೊಹರಂ ಸಡಗರ ಈ ಬಾರಿ ಕಾಣಲಿಲ್ಲ. ಜಿಲ್ಲೆಯಾದ್ಯಂತ ಮೊಹರಂ ಖುಷಿ ಮನೆ ಮಾಡಿದ್ದರೂ ಅಲ್ಲಿ ಮಾತ್ರ ಜನರಲ್ಲಿ ಬೇಸರವೇ ಪ್ರಮುಖವಾಗಿ ಕಂಡುಬಂದಿತು.

ಮರಕುಂಬಿಯಲ್ಲಿ ದಶಕದ ಹಿಂದೆ ಗಲಭೆ, ಅಸ್ಪೃಶ್ಯತೆ ಆಚರಣೆ, ದಲಿತರ ಮೇಲೆ ದೌರ್ಜನ್ಯ, ಗುಡಿಸಲುಗಳಿಗೆ ಬೆಂಕಿ ಸೇರಿದಂತೆ ಅನೇಕ ದುರ್ಘಟನೆಗಳು ನಡೆದಿದ್ದವು. ಈ ಪ್ರಕರಣದ 101 ಅಪರಾಧಿಗಳ ಪೈಕಿ 98 ಜನರಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ಎಲ್ಲ ಬೆಳವಣಿಗೆಗಳ ನಂತರ ಯಾರೂ ದರ್ಗಾ ಬಳಿ ಸುಳಿಯಲಿಲ್ಲ. ಶನಿವಾರ ಕತಲ್ ರಾತ್ರಿ ಇದ್ದರೂ ಜನ ಹಬ್ಬದ ಆಚರಣೆಗೆ ಮುಂದಾಗಿಲ್ಲ. ಪೂಜೆಗೆ ಮಾತ್ರ ಹಬ್ಬ ಸೀಮಿತಗೊಳಿಸಲಾಯಿತು. ಗ್ರಾಮದ ಬಹುತೇಕ ಜನ ಊರು ತೊರೆದು ಸಂಬಂಧಿಕರ ಊರಿಗೆ ತೆರಳಿ ಹಬ್ಬ ಆಚರಿಸಿದ್ದಾರೆ ಎಂದು ಗ್ರಾಮದ ಮೂಲಗಳು ತಿಳಿಸಿವೆ.   

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.