ADVERTISEMENT

ಕೊಪ್ಪಳ| ನೆಟ್‌ಬಾಲ್‌: ವಿ.ವಿ ತಂಡಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 5:59 IST
Last Updated 5 ಫೆಬ್ರುವರಿ 2023, 5:59 IST
ಕಾವೇರಿ
ಕಾವೇರಿ   

ಕೊಪ್ಪಳ: ದಾವಣಗೆರೆಯಲ್ಲಿ ನಡೆದಿದ್ದ ವಿಶ್ವವಿದ್ಯಾಲಯದ ನೆಟ್‌ಬಾಲ್‌ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ನಗರದ ಗವಿಟ್ರಸ್ಟ್‌ನ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಮಹಿಳಾ ತಂಡದಲ್ಲಿ ಕಾವೇರಿ, ನೇತ್ರಾ ಮತ್ತು ಲಿಖಿತಾ, ಪುರುಷರ ತಂಡದಲ್ಲಿ ಸಿದ್ದಾರ್ಥ ಸ್ಥಾನ ಗಳಿಸಿದ್ದಾರೆ. ಅಂತರ ವಾರ್ಸಿಟಿ ಕ್ರೀಡಾಕೂಟದಲ್ಲಿ ರಾಜೀವಗಾಂಧಿ ವಿ.ವಿ. ಮಹಿಳಾ ನೆಟ್‌ಬಾಲ್‌ ತಂಡ ಹರಿಯಾಣದಲ್ಲಿ ಮತ್ತು ಪುರುಷರ ತಂಡ ಬೆಂಗಳೂರಿನಲ್ಲಿ ಟೂರ್ನಿ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT