ತಾವರಗೇರಾ: ಪಟ್ಟಣದ ಗಂಗಾವತಿ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಕುಷ್ಟಗಿ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ್ ಕ್ರೀಡಾಂಗಣವನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ಈ ನೂತನ ಒಳಾಂಗಣ ಕ್ರೀಡಾಂಗಣವು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹ 1ಕೋಟಿ 60 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಸ್ಥಳೀಯ ಕ್ರೀಡಾಪಟುಗಳು ಸದುಪಯೋಗ ಪಡೆಯಬೇಕು ಎಂದರು.
ಪ.ಪಂ ಮುಖ್ಯಾಧಿಕಾರಿ ನಬಿಸಾಬ ಖುದನ್ನವರ, ಪ.ಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ, ಉಪಾಧ್ಯಕ್ಷೆ ದುರಗಮ್ಮ ಸಿರವಾಟೆ, ಸದಸ್ಯರಾದ ಬೇಬಿರೇಖಾ, ಅಂಬುಜಾ ಹೂಗಾರ, ಶ್ರೀನಿವಾಸ ನಿಡಶೇಸಿ, ವೀರನಗೌಡ, ಶ್ಯಾಮಣ್ಣ ಭಜಂತ್ರಿ, ಪ್ರಮುಖರಾದ ಸಾಗರ ಬೇರಿ, ಅರುಣಕುಮಾರ, ಕರಡೆಪ್ಪ, ಶಿವರಾಜಗೌಡ ಪಾಟೀಲ್, ಪರಶುರಾಮ, ಮಂಜುನಾಥ ಮತ್ತು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.