ADVERTISEMENT

ಯಲಬುರ್ಗಾ: ತುಂಡಾದ ವಿದ್ಯುತ್ ತಂತಿ; ಎತ್ತು ಸಾವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 5:28 IST
Last Updated 19 ಅಕ್ಟೋಬರ್ 2024, 5:28 IST
ಯಲಬುರ್ಗಾ ತಾಲ್ಲೂಕು ಬುಡಕುಂಟಿ ಗ್ರಾಮದಲ್ಲಿ ಶುಕ್ರವಾರ ವಿದ್ಯುತ್ ತಂತಿ ತುಂಡಾಗಿ ಕೊಟ್ಟಿಗೆಯ ಮೇಲೆ ಬಿದ್ದ ಪರಿಣಾಮ ಎತ್ತು ಮೃತಪಟ್ಟಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು
ಯಲಬುರ್ಗಾ ತಾಲ್ಲೂಕು ಬುಡಕುಂಟಿ ಗ್ರಾಮದಲ್ಲಿ ಶುಕ್ರವಾರ ವಿದ್ಯುತ್ ತಂತಿ ತುಂಡಾಗಿ ಕೊಟ್ಟಿಗೆಯ ಮೇಲೆ ಬಿದ್ದ ಪರಿಣಾಮ ಎತ್ತು ಮೃತಪಟ್ಟಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು   

ಯಲಬುರ್ಗಾ: ಜೋರಾಗಿ ಬೀಸಿದ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ತಗಡಿನ ಚಪ್ಪರದ ಮೇಲೆ ಬಿದ್ದ ಪರಿಣಾಮ ಅದರಲ್ಲಿದ್ದ ಎತ್ತು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬುಡಕುಂಟಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಗ್ರಾಮದ ರಾಮಣ್ಣ ಸಣ್ಣ ವೀರಪ್ಪ ಭೂತನವರ್ ಎಂಬರಿಗೆ ಸೇರಿದ ಎತ್ತು ಈಚೆಗೆ ಒಂದೂವರೆ ಲಕ್ಷಕೊಟ್ಟು ಖರೀದಿಸಿದ್ದರು. ಸಾಲಮಾಡಿ ಕೃಷಿ ಚಟುವಟಿಕೆಗಾಗಿ ಖರೀಸಿದ್ದ ಎತ್ತು ಈಗ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಭಾರಿ ನಷ್ಟಕ್ಕೆ ಕಾರಣವಾಗಿದೆ.  ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬೇವೂರು ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಜೆಸ್ಕಾಂ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT