ADVERTISEMENT

ಕೊಪ್ಪಳ | ಮಳೆಯಿಂದ ನೆಲಕ್ಕೊರಗಿದ ಭತ್ತ: ಕ್ರಿಮಿನಾಶಕ ಸೇವಿಸಲು ಮುಂದಾದ ರೈತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 12:26 IST
Last Updated 24 ಅಕ್ಟೋಬರ್ 2025, 12:26 IST
<div class="paragraphs"><p>ನೆಲಕ್ಕೊರಗಿದ ಭತ್ತ</p></div>

ನೆಲಕ್ಕೊರಗಿದ ಭತ್ತ

   

ಕೊಪ್ಪಳ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆ ಹಾಗೂ ಗಾಳೆಯಿಂದಾಗಿ ಭತ್ತದ ಬೆಳೆಗೆ ಹಾನಿಯಾಗಿದ್ದು, ಇದರಿಂದ ಮನನೊಂದು ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದ ರೈತ ಲಕ್ಷ್ಮಣ ರಾಜರಾಮಪೇಟೆ ಕ್ರಿಮಿನಾಶಕ ಸೇವಿಸಲು ಮುಂದಾಗಿದ್ದ ಘಟನೆ ಶುಕ್ರವಾರ ನಡೆದಿದೆ.

ಅಕ್ಕಪಕ್ಕದಲ್ಲಿದ್ದರು ರೈತನನ್ನು ತಡೆದು ಸಮಾಧಾನ ಪಡಿಸಿದ್ದಾರೆ. ಲಕ್ಷ್ಮಣ ಎಂಟು ಎಕರೆಯಲ್ಲಿ ಭತ್ತ ಬೆಳೆದಿದ್ದರು.

ADVERTISEMENT

ನಿರಂತರ ಮಳೆಯಿಂದಾಗಿ ಕೊಪ್ಪಳ ತಾಲ್ಲೂಕಿನ ಹಿಟ್ನಾಳ, ಹುಲಿಗಿ, ಅಗಳಕೇರಾ, ಬಂಡಿಹರ್ಲಾಪುರ, ಬಸಾಪುರ ಸೇರಿದಂತೆ ಅನೇಕ ಕಡೆ ಭತ್ತದ ಬೆಳೆಗೆ ಹಾನಿಯಾಗಿದೆ. ಗಂಗಾವತಿ ಮತ್ತು ಕಾರಟಗಿ ತಾಲ್ಲೂಕಿನಲ್ಲಿಯೂ ಭತ್ತ ನೆಲಕ್ಕೊರಗಿದೆ. ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಿಗ್ಗೆಯಿಂದ ಸಂಜೆ ತನಕ ಮಳೆ ಸುರಿದಿದ್ದು ದೈನಂದಿನ ಚಟುವಟಿಕೆ ಮೇಲೂ ಪರಿಣಾಮ ಬೀರಿತು.

‘ಗಾಳಿ ಹಾಗೂ ಮಳೆಯಿಂದಾಗಿ ಜಿಲ್ಲೆಯ ಕೆಲವು ಕಡೆ ಭತ್ತದ ಬೆಳೆಗೆ ಹಾನಿಯಾಗಿದ್ದು ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಳೆ ಪೂರ್ಣವಾಗಿ ನಿಂತ ಬಳಿಕ ಹಾನಿ ಪ್ರಮಾಣ ಗೊತ್ತಾಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.