ADVERTISEMENT

ಕೋವಿಡ್ ಲಸಿಕೆ ಪಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 12:38 IST
Last Updated 28 ಜೂನ್ 2021, 12:38 IST
ಕನಕಗಿರಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ನೀಡಲಾಯಿತು
ಕನಕಗಿರಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ನೀಡಲಾಯಿತು   

ಕನಕಗಿರಿ: ತಾಲ್ಲೂಕಿನ ಕರಡೋಣ ಹಾಗೂ ಕಲಕೇರಿ ಗ್ರಾಮದಲ್ಲಿ ಸೋಮವಾರ ಆರೋಗ್ಯ ತಪಾಸಣೆ, ಕ್ಷಯ ರೋಗ ಜಾಗೃತಿ ಹಾಗೂ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯಿತು.

ಸಮೀಪದ ಕರಡೋಣ ಗ್ರಾಮದಲ್ಲಿ ನವಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಡೆದ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ನಾಯಕ ಮಾತನಾಡಿ,‘ಕೊರೊನಾ ತೊಲಗಿಸಲು ಸರ್ಕಾರ ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಭಯ ಪಡಬಾರದು’ ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿ ಪಂಪನಗೌಡ, ಸದಾನಂದ, ಲಕ್ಷ್ಮೀ ‌ದೇವಿ, ಹನುಮಂತಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ನೂರಪಾಷಾ ಕನಕಗಿರಿ, ವೀರೇಶಪ್ಪ, ಹನುಮಂತ ಹಾಗೂ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ADVERTISEMENT

ಕಲಕೇರಿ: ಸಮೀಪದ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಕೇರಿ ಗ್ರಾಮದ ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೀರ ಅಲಿ ಹಾಗೂ ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಕ ಕಲ್ಲಪ್ಪ ಬೂದಿಹಾಳ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಂಡಪ್ಪ ನಿಂಗಪ್ಪ, ಉಪಾಧ್ಯಕ್ಷೆ ಈಶಮ್ಮ ಈಶಪ್ಪ, ಸದಸ್ಯರಾದ ನಾಗರಾಜ, ಯಮನೂರಪ್ಪ, ಲಕ್ಷ್ಮೀ ಬೆಟ್ಟಪ್ಪ, ಕವಿತಾ ಶಿವಲಿಂಗಪ್ಪ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಂಗಮ್ಮ, ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ ಹಾಗೂ ಸಿದ್ರಾಮಪ್ಪ ಇದ್ದರು.

ಲಸಿಕೆ ಹಾಕಿಸಿಕೊಂಡವರು ಸೆಲ್ಫಿ ಪ್ರೇಮ್‌ನಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.