ADVERTISEMENT

ಗಂಗಾವತಿ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:53 IST
Last Updated 27 ಡಿಸೆಂಬರ್ 2025, 5:53 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಗಂಗಾವತಿ: ಫೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸಷೆನ್ಸ್‌ ನ್ಯಾಯಾಲಯ 20 ವರ್ಷ ಜೈಲು ಹಾಗೂ ₹1.5 ಲಕ್ಷ ದಂಡ ವಿಧಿಸಿದೆ.

ಗಂಗಾವತಿಯ ಎಚ್.ಆರ್.ಎಸ್ ಕಾಲೊನಿಯ ನಿವಾಸಿ ಹುಲ್ಲೇಶ ಕೊಜ್ಜ ಎಂಬಾತ ಬಾಲಕಿ ಶಾಲೆಗೆ ಹೋಗಿ ಬರುವಾಗ ಬಾಧಿತಳನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದನು. 2022ರ ಸೆಪ್ಟೆಂಬರ್ 7ರಂದು ಬಾಲಕಿ ಶಾಲೆಗೆ ಹೋಗುವ ಸಮಯದಲ್ಲಿ ಹೊಸಳ್ಳಿ ಕ್ರಾಸ್ ಹತ್ತಿರ ತನ್ನ ಮಾವನ ಮೋಟಾರ ಸೈಕಲ್ ತೆಗೆದುಕೊಂಡು ಬಂದು ಶಾಲೆಗೆ ಬಿಡುವುದಾಗಿ ಹೇಳಿ ಮೋಟಾರ್ ಸೈಕಲ್ ಮೇಲೆ ಹತ್ತುವಂತೆ ಹೇಳಿದಾಗ ಬಾಲಕಿ ನಿರಾಕರಿಸಿದ್ದಳು. ಅವಳನ್ನು ಹೆದರಿಸಿ ಕೂಡಿಸಿಕೊಂಡು ಶಾಲೆಗೆ ಬಿಡದೇ ಬಲವಂತವಾಗಿ ಮಲ್ಲಾಪುರ ಸೀಮಾದ ವಾನಭದ್ರೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನ್ನ ಮತ್ತು ಅಪ್ಪನನ್ನು ಸಾಯಿಸುವುದಾಗಿ ಜೀವ ಹೆದರಿಕೆ ಹಾಕಿದ್ದನು.

ADVERTISEMENT

ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನೀರಿಕ್ಷಕ ಮಂಜುನಾಥ ಎಸ್. ಅವರು ದೂರು ಸ್ವೀಕರಿಸಿ ಪ್ರಕರಣದ ತನಿಖೆ ನಿರ್ವಹಿಸಿದ್ದರು. ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ದಂಡ ಹಾಗೂ ಶಿಕ್ಷೆ ಪ್ರಕಟಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.