ADVERTISEMENT

ಸ್ವರ ಶ್ರದ್ದಾಂಜಲಿ: ಕೊಪ್ಪಳಕ್ಕೆ ಇಂದು ಪ್ರವೀಣ ಗೋಡ್ಕಿಂಡಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:11 IST
Last Updated 22 ಡಿಸೆಂಬರ್ 2025, 7:11 IST
ಹನುಮಂತರಾವ್ ಬಂಡಿ
ಹನುಮಂತರಾವ್ ಬಂಡಿ   

ಕೊಪ್ಪಳ: ಕಿನ್ನಾಳದ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಹಾಗೂ ಇಲ್ಲಿನ ಪುರಂದರದಾಸರ ಭಜನಾ ಮಂಡಳಿ ಜಂಟಿಯಾಗಿ ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಸಂಜೆ 6 ಗಂಟೆಗೆ 18ನೇ ವರ್ಷದ ಸಂಗೀತ ಮಹೋತ್ಸವ ಮತ್ತು ದಿ. ಹನುಮಂತರಾವ್‌ ಬಂಡಿ (ಕುಲಕರ್ಣಿ) ಅವರ 15ನೇ ವರ್ಷದ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮ ಜರುಗಲಿದೆ.

ರಾಯರ ಮಠ, ಸಂಸ್ಕಾರ ಭಾರತ, ಕನ್ನಡ ಮತ್ತು ಸಂಸ್ಕೃತಿಇಲಾಖೆ ಹಾಗೂ ಪಾನಘಂಟಿ ಫೌಂಡೇಷನ್‌ ಸಹಕಾರದಿಂದ ನಡೆಯುವ ಕಾರ್ಯಕ್ರಮವನ್ನು ರಾಯರ ಮಠದ ಪ್ರಧಾನ ಅರ್ಚಕ ರಘುಪ್ರೇಮಾಚಾರ್ ಮುಳಗುಂದ ಉದ್ಘಾಟಿಸುವರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು.

ಹೆಸರಾಂತ ಬಾನ್ಸುರಿ ವಾದಕ ಪಂಡಿತ್‌ ಪ್ರವೀಣ ಗೋಡ್ಕಿಂಡಿ, ಸಿತಾರವಾದಕ ಅರ್ಜುನ ಆನಂದ, ಶಾಸ್ತ್ರೀಯ ಭರತನಾಟ್ಯ ಕಲಾವಿದರಾದ ಕವಿತಾ ಸಾಗರ, ಸಂಗಪ್ಪ ಎಸ್‌. ಸೋಮಾ, ದಾಸವಾಣಿ ಪರಿಣತ ವಾದಿರಾಜ ಪಾಟೀಲ, ಶಾಸ್ತ್ರೀಯ ಸಂಗೀತ ಲಚ್ಚಣ್ಣ ಕಿನ್ನಾಳ, ಕಥಕ್‌ ನೃತ್ಯ ಪ್ರದರ್ಶಿಸುವ ಶ್ವೇತಾ ಸೊಂಡೂರ ಕುಲಕರ್ಣಿ, ತಾಳ ವಾದಕರಾದ ಕೃಷ್ಣ ಆರ್‌. ಸೊರಟೂರು ಹಾಗೂ ಗೋವಿಂದರಾಜ ಸೇರಿದಂತೆ ಅನೇಕರು ಸಂಗೀತ ಕಾರ್ಯಕ್ರಮ ನೀಡುವರು. ಬದರಿ ಪುರೋಹಿತ್‌ ಅವರು ವಿಶೇಷ ವ್ಯಂಗ್ಯಚಿತ್ರ ಪ್ರದರ್ಶನ ನೀಡುವರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.