ADVERTISEMENT

ಯಲಬುರ್ಗಾ: ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:27 IST
Last Updated 24 ಅಕ್ಟೋಬರ್ 2024, 15:27 IST
ಯಲಬುರ್ಗಾ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ್‌ ವಿರೂಪಾಕ್ಷಪ್ಪ ಹೊರಪೇಟಿ, ಅಂದಯ್ಯ ಕಳ್ಳಿಮಠ ಭಾಗಿಯಾಗಿದ್ದರು
ಯಲಬುರ್ಗಾ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ್‌ ವಿರೂಪಾಕ್ಷಪ್ಪ ಹೊರಪೇಟಿ, ಅಂದಯ್ಯ ಕಳ್ಳಿಮಠ ಭಾಗಿಯಾಗಿದ್ದರು   

ಯಲಬುರ್ಗಾ: ‘ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅದ್ದೂರಿ ಆಚರಣೆಗಾಗಿ ತಾಲ್ಲೂಕಿನ ವಿವಿಧ ಅನುಷ್ಠಾನ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು’ ಎಂದು ಗ್ರೇಡ್-2 ತಹಶೀಲ್ದಾರ್‌ ವಿರೂಪಾಕ್ಷಪ್ಪ ಹೊರಪೇಟಿ ಹೇಳಿದರು.

ರಾಜ್ಯೋತ್ಸವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,‘ವಿವಿಧ ಕನ್ನಡಪರ ಸಂಘಟನೆಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಆಚರಣೆಯಲ್ಲಿ‌ ಪ್ರತಿಯೊಬ್ಬರೂ ಆಸಕ್ತಿ ತೋರಬೇಕು’ ಎಂದರು.

ಕನ್ನಡಪರ ಸಂಘಟನೆಯ ಮುಖಂಡ ರಾಜಶೇಖರ ಶ್ಯಾಗೋಟಿ, ಶ್ರೀಕಾಂತಗೌಡ ಮಾಲಿಪಾಟೀಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮಾತನಾಡಿದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯ ಕಳಕಪ್ಪ ತಳವಾರ, ಹನಮಂತಪ್ಪ ಭಜಂತ್ರಿ, ಅಮರೇಶ ಹುಬ್ಬಳ್ಳಿ, ಕನ್ನಡಪರ ಸಂಘಟನೆಯ ಶಿವಕುಮಾರ ನಾಗನಗೌಡ್ರ, ರವಿ ವಡ್ಡರ, ಕರಿಯಪ್ಪ ತಿಪ್ಪನಾಳ, ಮೌನೇಶ ಬಡಿಗೇರ, ತಿಮ್ಮನಗೌಡ ಪೊಲೀಸ್‍ಪಾಟೀಲ, ವೀರಭದ್ರಪ್ಪ ಅಂಗಡಿ, ನಿಂಗನಗೌಡ ಪಾಟೀಲ ಶಿವಶಂಕರ ಕರಡಕಲ್ಲ, ಹನಮಗೌಡ ಪಾಟೀಲ, ದೇವರಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.