ADVERTISEMENT

ಬೆಲೆ ಏರಿಕೆ; ವಿವಿಧೆಡೆ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 4:37 IST
Last Updated 13 ಏಪ್ರಿಲ್ 2022, 4:37 IST
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶಹಾಬಾದ್‌ ಸಮೀಪದ ಭಂಕೂರು ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿದರು
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶಹಾಬಾದ್‌ ಸಮೀಪದ ಭಂಕೂರು ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿದರು   

ಶಹಾಬಾದ್: ಬೆಲೆ ಏರಿಕೆ ಖಂಡಿಸಿ ಭಂಕೂರ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಚಿತ್ತಾಪೂರ ಶಾಸಕ ಪ್ರಿಯಾಂಕ ಖರ್ಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡೆ ಗಮನ ಕೊಡದೆ ಕೋಮುಭಾವನೆಗಳನ್ನ ಕೆರಳಿಸುತ್ತಾ ಕಲಹ ತಂದೊಡ್ಡುತ್ತ ಕಾಲಹರಣ ಮಾಡುತ್ತಿರುವ
ನೀತಿಗೆಟ್ಟ ಸರ್ಕಾರ ಮುಂದುವರಿಯಬಾರದು. ಬಿಜೆಪಿ ಸರ್ಕಾರ ಯುವಕ, ರೈತ, ಮಹಿಳೆ, ಕಾರ್ಮಿಕರ ವಿರೋಧಿಯಾಗಿದೆ. ಎಷ್ಟೋ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿಲ್ಲ. ಆರ್ಥಿಕ ಪ್ರಗತಿ ಕೂಡ ಶೂನ್ಯ . ಎಂದು ಕಿಡಿಕಾರಿದರು.

ರೈತರ ಆದಾಯ ಮಾಡಿದ್ದೀರಾ ಎಂದರೆ ಭಗವತ್ ಗೀತಾ ಓದಿದ್ದೀರಾ ಎಂದು ಕೇಳುತ್ತಾರೆ. ಅಡುಗೆ ಎಣ್ಣೆ ಜಾಸ್ತಿಯಾಗಿದೆ ಎಂದು ಚರ್ಚೆ ಮಾಡೋಣ ಎಂದರೆ ಹಿಜಾಬ ಬಗ್ಗೆ ಚರ್ಚೆ ಮಾಡೋಣ ಅಂತಾರೆ ಎಂದು ಟೀಕಿಸಿದರು.

ADVERTISEMENT

ಡಾ.ರಶೀದ್ ಮರ್ಚಂಟ, ಸುರೇಶ ಮೆಂಗನ್, ಮುಜಾಹಿದ್ ಹುಸೇನ್, ಮೃತ್ಯುಂಜಯ ಹಿರೇಮಠ,ಚಂದು ಜಾಧವ, ಸಿದ್ದುಗೌಡ ಅಫಜಲಪೂರಕರ್ ಮಾತನಾಡಿದರು. ಶಿವಾನಂದ ಪಾಟೀಲ್, ಮಲ್ಲಿಕಾರ್ಜುನ್ ಪೂಜಾರಿ, ಶರಣಬಸಪ್ಪ ಧನ್ನಾ, ಮುನ್ನಾಪಟೇಲ್, ಮಹೇಶ ಧರಿ, ಕಿರಣ ಚವ್ಹಾಣ, ಮರಲಿಂಗ, ಮಮ್ಮದ್ ಜಾಕೀರ್, ಜಾನಿ ಪಟೇಲ್, ಶರಣಗೌಡ ದಳಪತಿ, ನಾಗೇಂದ್ರ ನಾಟೇಕಾರ, ಸಾಯಿಬಣ್ಣ ಭೀಮನಹಳ್ಳಿ, ದೇವರಾಜ್, ವಿದ್ಯಾಸಾಗರ, ಮಲ್ಲಣ್ಣ ಅಲ್ಲೂರ್, ರವಿ ರಾಠೋಡ, ಅಂಜನಕುಮಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.