ಯಲಬುರ್ಗಾ: ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಗ್ರಾಮದ ಗವಿಮಠದಿಂದ ಹೊರಟ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದು ಶರಣಬಸವೇಶ್ವರ ದೇವಸ್ಥಾನದವರೆಗೆ ಅದ್ದೂರಿಯಾಗಿ ನೆರವೇರಿತು. ಚಾಲನೆ ಸಂದರ್ಭದಲ್ಲಿ ಅನೇಕ ಗಣ್ಯರು ಗವಾಯಿಗಳವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು.
ಮುಖಂಡರಾದ ವಿರೂಪಾಕ್ಷಯ್ಯ ಹಿರೇಮಠ, ತಾ.ಪಂ. ಮಾಜಿ ಸದಸ್ಯ ಮಲ್ಲಣ್ಣ ಮಲ್ಲಾಪೂರ, ಗ್ರಾ.ಪಂ. ಮಾಜಿ ಅಧ್ಯಕ್ಷ ಗಾಳೆಪ್ಪ ಓಜನಹಳ್ಳಿ, ಪರಮೇಶ್ವರಪ್ಪ, ಶೇಖರಗೌಡ ಗೌಡ್ರ, ವಿರೇಶ ಕಾಯಿ, ವೆಂಕಟೇಶ ಈಳಿಗೇರ, ಶಿವಕುಮಾರ ಡಗ್ಗಿ, ಶರಣಪ್ಪ ಗಾಣದಾಳ, ಮಲ್ಲು ಸಜ್ಜನ್, ಅಶೋಕ ಹರ್ಲಾಪೂರ, ಮಲ್ಲಣ್ಣ, ಬಸಯ್ಯಸ್ವಾಮಿ ಹಿರೇಮಠ, ಪ್ರದೀಪಗೌಡ, ಮಲ್ಲಿಕಾರ್ಜುನ ಗಡಾದ ಶೆಟ್ಟರ್, ಮಂಜುನಾಥ ನಾಯಕವಾಡ, ಶೋಭಾ, ಮಹಾಂತೇಶ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.