ADVERTISEMENT

ಗಂಗಾವತಿ | ‘ರಾಮಾಯಣದ ಮೌಲ್ಯಗಳು ದಾರಿದೀಪ’

ವಡ್ಡರಹಟ್ಟಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:37 IST
Last Updated 3 ನವೆಂಬರ್ 2025, 7:37 IST
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು   

ಗಂಗಾವತಿ: ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ. ವಾಲ್ಮೀಕಿ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ವಾಲ್ಮೀಕಿ ಸಮಾಜದ ಮುಖಂಡ ಟಿ.ಮಾರುತಿ ನಾಯಕ ಹೇಳಿದರು.

ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಭಾನುವಾರ ಆಯೋ ಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

‘ವಾಲ್ಮೀಕಿ ಸಮುದಾಯದ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು. ಎಲ್ಲರೂ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮುದಾಯದ ಜನರಲ್ಲಿ ಒಗ್ಗಟ್ಟು ಮೂಡಬೇಕು. ಆಗ ಮಾತ್ರ ಸಮಾಜ ಬಲಿಷ್ಠವಾಗಿ ರಚನೆಯಾಗಲು ಸಾಧ್ಯ’ ಎಂದರು.

ADVERTISEMENT

ಮುಖಂಡ ಟಿ.ಷಣ್ಮುಖ ನಾಯಕ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಅವರ ತತ್ವಾದ ರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದರು. 

ಅದ್ದೂರಿ ಮೆರವಣಿಗೆ: ವಡ್ಡರಹಟ್ಟಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಗ್ರಾಮದ ಮುಖಂಡರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಆರಂಭಗೊಂಡ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮುಖಾಂತರ ಅದ್ದೂರಿಯಾಗಿ ಜರುಗಿತು.

ಶಿವಪ್ಪ ನಾಯಕ ಹತ್ತಿಮರದ, ಟಿ.ಷಣ್ಮುಖ ನಾಯಕ, ಟಿ.ತಿಮ್ಮಣ್ಣ ನಾಯಕ, ಎನ್. ವೀರೇಶಪ್ಪ ನಾಯಕ, ವಕೀಲರಾದ ಟಿ.ಹನುಮಗೌಡ ಹತ್ತಿಮರದ ರಾಮಣ್ಣ, ಎಚ್.ವೀರೇಶ, ಚಿನ್ನಪ್ಪ ನಾಯಕ, ಟಿ.ಮಲ್ಲೇಶ, ಜಿ.ಪರಶುರಾಮ, ಶ್ರೀನಿವಾಸ ನಾಯಕ, ವದ್ದಟ್ಟಿ ಲಕ್ಷ್ಮಣ್, ಆದಪ್ಪ ದೋಟಿಹಾಳ, ಮಂಜುನಾಥ ರಾಟಿ ಮತ್ತಿತರರು ಉಪಸ್ಥಿತರಿದ್ದರು.