ಕುಷ್ಟಗಿ: ಕಿತ್ತೂರು ಸಂಸ್ಥಾನದ ಕ್ರಾಂತಿಕಾರಿ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪಟ್ಟಣದಲ್ಲಿ ಸ್ಥಾಪಿಸಲಾಯಿತು.
ಹಾಲುಮತ ಸಮುದಾಯದ ವತಿಯಿಂದ ಯರಗೋಳದಲ್ಲಿ ಸಿದ್ಧಪಡಿಸಲಾದ ಪ್ರತಿಮೆಯನ್ನು ಭಾನುವಾರ ಪಟ್ಟಕ್ಕೆ ತರಲಾಗಿದ್ದು ಅಲಂಕೃತ ವಾಹನದಲ್ಲಿ ಇರಿಸಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ನಂತರ ಕೊಪ್ಪಳ ರಸ್ತೆಯ ಬಳಿ ಗುರುತಿಸಲಾಗಿದ್ದ ಸ್ಥಳದಲ್ಲಿ ಸ್ಥಾಪಿಸಲಾಯಿತು.
ಮೆರವಣಿಗೆಯಲ್ಲಿ ಹಾಲುಮತದ ಹಾಗೂ ಇತರೆ ಸಮುದಾಯಗಳ ಜನರು, ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದು ಗಮನಸೆಳೆಯಿತು. ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಹಾಲುಮತ ಸಮುದಾಯದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಸುರೇಶ ಗೋಕಾಕ, ಮಂಜುನಾಥ ನಾಲಗಾರ ಸೇರಿದಂತೆ ಅನೇಕ ಪ್ರಮುಖರು, ಯುವಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.