ADVERTISEMENT

ಕೊಪ್ಪಳ: ತುಂಗಭದ್ರಾ ನದಿ ನೀರಿನ ನಡುವೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 7:10 IST
Last Updated 10 ಆಗಸ್ಟ್ 2022, 7:10 IST
ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧರಾದ ಸಿಬ್ಬಂದಿ
ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧರಾದ ಸಿಬ್ಬಂದಿ   

ಕೊಪ್ಪಳ: ಜಿಲ್ಲೆಯ ‌ಮುನಿರಾಬಾದ್ ಸಮೀಪದ ಶಿವಪುರ ಗಡ್ಡೆಯಲ್ಲಿ ಹೊಲದ‌ ಕೆಲಸಕ್ಕೆ ಹೋಗಿದ್ದ ಕೆಲವರು ತುಂಗಭದ್ರಾ ನದಿಯ ನೀರಿನ ನಡುವೆ ಸಿಲುಕಿದ್ದಾರೆ.

ದನಕರುಗಳನ್ನು ಮೇಯಿಸಲು ಹೊಲದ ಕಡೆ ಹೋದವರು ವಾಪಸ್ ಬಂದಿಲ್ಲ. ತುಂಗಭದ್ರಾ ನೀರಿನ ರಭಸ ಹೆಚ್ಚಾಗುತ್ತಿರುವ ಕಾರಣ ಅಲ್ಲಿಯೇ ಉಳಿದುಕೊಂಡಿದ್ದಾರೆ. ಒಟ್ಟು ಹತ್ತು ಜನ ಸಿಲುಕಿದ್ದು, ಅವರಿದ್ದ ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿ ಹಾಗೂ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ ತೆರಳಿದ್ದಾರೆ. ಸಿಲುಕಿ ಬಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುವ ಪ್ರಕ್ರಿಯೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT