ADVERTISEMENT

ಯಲಬುರ್ಗಾ: ಆರ್‌ಎಸ್‍ಎಸ್ ಸ್ವಯಂ ಸೇವಕರಿಂದ ಪಥ ಸಂಚಲನ

ಹೂಮಳೆಸುರಿಸಿದ ಅಭಿಮಾನಿಗಳು, ರಂಗೋಲಿ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:26 IST
Last Updated 13 ಅಕ್ಟೋಬರ್ 2025, 6:26 IST
ಯಲಬುರ್ಗಾ ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಆಚರಣೆ ಪ್ರಯುಕ್ತ ಸ್ವಯಂ ಸೇವಕರಿಂದ ಬೃಹತ್ ಪಥ ಸಂಚಲನ ಜರುಗಿತು 
ಯಲಬುರ್ಗಾ ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಆಚರಣೆ ಪ್ರಯುಕ್ತ ಸ್ವಯಂ ಸೇವಕರಿಂದ ಬೃಹತ್ ಪಥ ಸಂಚಲನ ಜರುಗಿತು    

ಯಲಬುರ್ಗಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಆಚರಣೆ ಪ್ರಯುಕ್ತ ಪಟ್ಟಣದಲ್ಲಿ ಸ್ವಯಂ ಸೇವಕರ ಬೃಹತ್ ಪಥ ಸಂಚಲನ ಅದ್ದೂರಿಯಾಗಿ ಜರುಗಿತು.

ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನದಿಂದ ಹೊರಟ ಸಂಚಲನವು ರೇಣುಕಾಚಾರ್ಯ ವೃತ್ತದಿಂದ ಬಸವ ವೃತ್ತ ಮಾರ್ಗವಾಗಿ ಸಾಗಿ ಮಡಿವಾಳ ಮಾಚಿದೇವ ವೃತ್ತದಿಂದ ಬಂಡಿರಸ್ತೆಯ ಮಾರ್ಗದಿಂದ ಕನಕದಾಸ ವೃತ್ತದ ಹಾದಿಯಿಂದ ಕನ್ನಡ ಕ್ರಿಯಾಸಮಿತಿ ವೃತ್ತ, ಕಿತ್ತೂರು ಚನ್ನಮ್ಮ ವೃತ್ತದ ಮಾರ್ಗದಲ್ಲಿ ಹಾದು ಮರಳಿ ದೇವಸ್ಥಾನಕ್ಕೆ ಸೇರಿತು.

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಸ್ವಯಂ ಸೇವಕರ ಪಥ ಸಂಚಲನದ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಅನೇಕ ಕಡೆಗಳಲ್ಲಿ ಬಣ್ಣ ಬಣ್ಣದ ಹೂವುಮಳೆಗರೆದರು. ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.

ADVERTISEMENT

ಇದಕ್ಕು ಮುನ್ನ ದೇವಸ್ಥಾನದಲ್ಲಿ ಚಾಲನಾ ಕಾರ್ಯಕ್ರಮ ಜರುಗಿತು. ಬಸವಲಿಂಗೇಶ್ವರ ಶ್ರೀಗಳು, ಮಾಜಿ ಸಚಿವ ಹಾಲಪ್ಪ ಆಚಾರ, ಗಣ್ಯರಾದ ನವೀನಕುಮಾರ ಗುಳಗಣ್ಣವರ, ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಈಳಿಗೇರ, ಶಿವನಗವಡ ಬನ್ನಪ್ಪಗೌಡ್ರ, ಸುರೇಶಗೌಡ ಶಿವನಗೌಡ್ರ, ದಾನನಗೌಡ ತೊಂಡಿಹಾಳ, ಸಿದ್ಧರಾಮೇಶ ಬೇಲೇರಿ ಸೇರಿ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.