ಕುಕನೂರು: ಪಟ್ಟಣದ 19ನೇ ವಾರ್ಡ್‌ನ ಗುದ್ನೆಪ್ಪನ ಮಠದ ವೃತ್ತದಲ್ಲಿ ಅಂಟಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಪೋಸ್ಟರ್ ಸೋಮವಾರ ರಾತ್ರಿಯಲ್ಲಿ ಕೆಲ ಕಿಡಗೇಡಿಗಳು ಹರಿದು ಅವಮಾನಿಸಿದ್ದಾರೆ.
ಇದನ್ನು ಗಮನಿಸಿದ ಬಂಜಾರ ಸಮಾಜದ ಮುಖಂಡರು ನೂರಾರು ಜನ ಜಮಾಯಿಸಿದ್ದರು.
ಪರಿಸ್ಥಿತಿ ಗಂಭೀರತೆಯನ್ನು ಅರಿತ ಸಿಪಿಐ ಮೌನೇಶ್ ಪಾಟೀಲ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದಾರೆ. ಬಳಿಕ ಸಮಾಜದ ಮುಖಂಡರೊಂದಿಗೆ ಮಾತನಾಡಿ,‘ಕೃತ್ಯವನ್ನು ವಿಕೃತ ಮನಸ್ಸುಳ್ಳವರು ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ. ಕಿಡಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ಮುಖಂಡ ಸುರೇಶ್ ಬಳೂಟಗಿ ಮಾತನಾಡಿ,‘ತಪ್ಪಿತಸ್ಥರನ್ನು ಹುಡುಕಿ ತಕ್ಕ ಶಿಕ್ಷೆ ನೀಡಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ’ ಎಂದರು.
ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಈ ವೇಳೆ ಮೇಘರಾಜ್ ಬಳಗೇರಿ, ಹಂಪಣ್ಣ ಕಟ್ಟಿಮನಿ, ಕುಮಾರ್ ಬಳಗೇರಿ, ಜಿತು ನಾಯಕ್, ಯಮನೂರ ಭಾನಪೂರ್, ಪ್ರಕಾಶ್ ಬಳಗೇರಿ, ಮಹೇಶ್ ಕಾರಭಾರಿ, ತಿರುಪತಿ ತಲ್ಲೂರು, ಕಿರಣ್ ರಾಥೋಡ್, ನಾಗರಾಜ್ ಭಾನಾಪುರ್, ಸೋಮಪ್ಪ ಚಿಕೇನಕೊಪ್ಪ, ಅರ್ಜುನ್ ಕಾರಭಾರಿ, ದುರ್ಗೇಶ್ ಕಟ್ಟಿಮನಿ, ಹನುಮಂತಪ್ಪ ಚವ್ಹಾಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.