ಕೊಪ್ಪಳ: ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರಲ್ಲಿ ಬಾಲಕನೊಬ್ಬನ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳ ಆರೋಪ ಸಾಬೀತಾಗಿದ್ದು, ನ್ಯಾಯಾಲಯವು ಅಪರಾಧಿ ಖಾದರ್ ಖಾನ್‌ಗೆ 10 ವರ್ಷ ಜೈಲು ಮತ್ತು ₹35 ಸಾವಿರ ದಂಡ ವಿಧಿಸಿದೆ.
ಶಾಲೆಯಲ್ಲಿದ್ದ ಬಾಲಕನಿಗೆ ನನ್ನ ಮೊಬೈಲ್ ಫೋನ್ ಮನೆಯಲ್ಲಿ ಕೊಟ್ಟು ಬಾ ಎಂದು ಪುಸಲಾಯಿಸಿ ತನ್ನ ಬಳಿ ಕರೆದ ಖಾದರ್ ಖಾನ್ ಶಾಲೆ ಬಳಿ ಬಾಲಕನ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಬೇರೆ ಕಡೆ ಕರೆದುಕೊಂಡು ಹೋಗಿ ಸಂಭೋಗ ಮಾಡಿದ್ದ. ಬಳಿಕ ಬಾಲಕನನ್ನು ಶಾಲೆಯ ಬಳಿ ವಾಪಸ್ ಬಿಟ್ಟು ಹೋಗಿ ಈ ವಿಷಯ ಬಹಿರಂಗಗೊಳಿಸಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದ.
ಈ ಘಟನೆಯನ್ನು ಬಾಲಕ ತನ್ನ ತಾಯಿ ಬಳಿ ಹೇಳಿಕೊಂಡಿದ್ದು, ಖಾದರ್ ಖಾನ್ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ. ತೀರ್ಪು ನೀಡಿದ್ದಾರೆ. ಸರ್ಕಾರಿ ಪ್ರಧಾನ ಅಭಿಯೋಜಕಿ ಬಂಡಿ ಅಪರ್ಣಾ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.