ಯಲಬುರ್ಗಾ: ತಾಲ್ಲೂಕಿನ ಕುದ್ರಿಕೊಟಗಿ ಗ್ರಾಮದ ಶರಣಬಸವೇಶ್ವರ ಜಾತ್ರೆಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ ಹಾಗೂ ಭಜನಾ ಕಾರ್ಯಕ್ರಮ ಮುಕ್ತಾಯ ಮತ್ತು ಸಾಮೂಹಿಕ ವಿವಾಹ, ಲಘು ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಯುವಕರು ಒಳ್ಳೆಯ ಗುಣ ಬೆಳೆಸಿಕೊಳ್ಳುವುದು ಹಾಗೂ ದುಶ್ಚಟಗಳಿಂದ ದೂರು ಉಳಿಯುವುದು ಮುಖ್ಯವಾಗಿದೆ. ಯುವಕರು ಸೇರಿ ನೂತನ ಉಚ್ಚಾಯದ ಮೆರವಣಿಗೆ ಹಾಗೂ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ಮಾದರಿಯಾಗಿದೆ. ಊರಿನ ಅಭಿವೃದ್ಧಿ ಹಾಗೂ ಸಾಂಸ್ಕøತಿಕ ಪರಂಪರೆ ಅಭಿವೃದ್ಧಿಯಾಗಬೇಕಾದರೆ ಸರ್ವ ಸಮುದಾಯದವರು ಒಗ್ಗೂಡಿ ನಮ್ಮ ಧರ್ಮ ಸಂಸ್ಕøತಿಯನ್ನು ಆಚರಣೆಗೆ ತರಬೇಕು ಎಂದರು.
ಕುಕನೂರಿನ ಅನ್ನದಾನೇಶ್ವರ ಮಠದ ಮಹಾದೇವ ದೇವರು ಮಾತನಾಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವ ನೂತನ ದಂಪತಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ನೂತನ ಉಚ್ಚಾಯದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಹಾಗೂ ಜಾತ್ರೋತ್ಸವಕ್ಕೆ ದೇಣಿಗೆ ನೀಡಿದ ಮಹನಿಯರನ್ನು ಸನ್ನಾನಿಸಿ ಗೌರವಿಸಿದರು. ಗ್ರಾಮದ ಗಣ್ಯರಾದ
ವಿರೇಶ ಬಳಗೇರಿಮಠ, ಶರಣಯ್ಯ, ಬಸವರಾಜ, ಸುರೇಶ, ಮುತ್ತಣ್ಣ, ಶರಣಕುಮಾರ್ ಅಮರಗಟ್ಟಿ, ಮಲ್ಲಪ್ಪ ರೇವಡಿ, ಶರಣಪ್ಪ, ಉಮೇಶಪ್ಪ, ಕಲ್ಲಯ್ಯ ಶಶಿಮಠ, ಸಿದ್ಲಿಂಗಯ್ಯ, ಶರಣು ಗುಮಗೇರಿ, ಶೇಖರಯ್ಯ ಹಿರೇಮಠ, ಬಸವರಾಜ ಮೇಟಿ, ಹನುಮಂತಪ್ಪ, ರವೀಂದ್ರಪ್ಪ ಚನಪನಹಳ್ಳಿ, ಪರಶುರಾಮ ಹಳ್ಳಿಗುಡಿ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.