ADVERTISEMENT

ದಾರಿ ತಪ್ಪಿಸುವ ಕೆಲಸ ಕೈಬಿಡಬೇಕು: ಶರಣೇಗೌಡ ಮಾಲಿಪಾಟೀಲ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:50 IST
Last Updated 28 ಜನವರಿ 2026, 6:50 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಕಾರಟಗಿ:‌ ಎಲ್ಲಾ ಕ್ರಸ್ಟಗೇಟ್‍ಗಳನ್ನು ಜೂನ್-ಜುಲೈ ಒಳಗೆ ಅಳವಡಿಸಿ ನಿಗದಿತ ಅವಧಿಯಲ್ಲಿ ನಾಲೆಗಳಿಗೆ ನೀರು ಹರಿಸುವುದು ನಿಶ್ಚಿತ. ಇದರ ಬಗ್ಗೆ ಅಧಿಕೃತ ಮಾಹಿತಿ, ಜ್ಞಾನ ಇಲ್ಲದ ಮಾಜಿ ಸಚಿವ ಬಸವರಾಜ ದಢೇಸೂಗೂರು ಜನರನ್ನು ದಾರಿ ತಪ್ಪಿಸುವ ಕೆಲಸ ಕೈಬಿಡಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

ಜಲಾಶಯದ ಕ್ರಸ್ಟ್‌ಗೇಟ್‍ಗಳ ಬಗ್ಗೆ ಅರೆಬರೆ ಮಾಹಿತಿಯೊಂದಿಗೆ ರಾಜಕೀಯ ಆರೋಪ ಮಾಡುವುದು ದಢೇಸೂಗೂರುಗೆ ಶೋಭೆಯಲ್ಲ. ₹10 ಕೋಟಿ ಅನುದಾನವನ್ನು ಹಿಂಪಡೆಯುವ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ಕ್ಷೇತ್ರದಲ್ಲಿ ಕಾನೂನುಬಾಹಿರ ಕೃತ್ಯಗಳು ಸಚಿವರ ಬೆಂಬಲಿಗರಿಂದ ನಡೆಯುತ್ತವೆ ಎಂದು ಆಧಾರರಹಿತ ಹೇಳಿಕೆ ನೀಡುವ ಬದಲು ಕ್ಷೇತ್ರದಲ್ಲಾಗಬೇಕಾದ ಅಭಿವದ್ದಿ ಕಾರ್ಯಗಳ ಬಗ್ಗೆ ಪ್ರಸ್ತಾಪಿಸಿದ್ದರೆ ಅವರಿಗೂ ಗೌರವ ಬರುತ್ತಿತ್ತು. ಏನೇ ಆರೋಪ ಮಾಡುವ ಮುನ್ನಾ ಅಧಿಕೃತ ದಾಖಲೆಯನ್ನಿಟ್ಟು ಮಾತನಾಡುವುದನ್ನು ಅವರು ಕಲಿಯಬೇಕು ಎಂದು ಹೇಳಿದರು.

ಮುಖಂಡ ಶರಣಪ್ಪ ಪರಕಿ ಮಾತನಾಡಿ, ದಢೇಸೂಗೂರು ತಮ್ಮ ಅಧಿಕಾರಾವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸದಸ್ಯರಾದ ದೊಡ್ಡಬಸವ ಬೂದಿ, ಶ್ರೀನಿವಾಸರೆಡ್ಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ದೇವರಾಜ ಬಾವಿಕಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ಮಹ್ಮದ್ ರಫಿ ಪ್ರಮುಖರಾದ ಖಾಜಾ ಹುಸೇನ್ ಮುಲ್ಲಾ, ವೀರೇಶ ಟಿವಿಎಸ್, ಸಾಗರ ಕುಲಕರ್ಣಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.