ADVERTISEMENT

‘ಕೃಷಿಯೊಂದಿಗೆ ಪರ್ಯಾಯ ಉದ್ಯೋಗ ಕೈಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 14:16 IST
Last Updated 12 ಅಕ್ಟೋಬರ್ 2021, 14:16 IST
ಕಾರಟಗಿಯಲ್ಲಿ ಕುರಿ ಸಾಕಾಣಿಕೆ ಕ್ಷೇಮಾಭಿವೃದ್ಧಿ ಸಂಘದ ಆರಂಭಕ್ಕೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಶರಣು ಬಿ ತಳ್ಳಿಕೇರಿ ಚಾಲನೆ ನೀಡಿ ಮಾತನಾಡಿದರು
ಕಾರಟಗಿಯಲ್ಲಿ ಕುರಿ ಸಾಕಾಣಿಕೆ ಕ್ಷೇಮಾಭಿವೃದ್ಧಿ ಸಂಘದ ಆರಂಭಕ್ಕೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಶರಣು ಬಿ ತಳ್ಳಿಕೇರಿ ಚಾಲನೆ ನೀಡಿ ಮಾತನಾಡಿದರು   

ಕಾರಟಗಿ: ರೈತರು, ಜನಸಾಮಾನ್ಯರು ಕೃಷಿಗೆ ಪರ್ಯಾಯವಾದ ಕೆಲಸಕ್ಕೆ ಒತ್ತು ನೀಡಿದರೆ, ಸರ್ಕಾರವು ಅನೇಕ ಯೋಜನೆಗಳಡಿ ಸಹಾಯ ಧನ ನೀಡಲಿದೆ. ಇದರಿಂದ ಆರ್ಥಿಕವಾಗಿ ಅಭಿವೃದ್ದಿ ಹೊಂದಿ ಸ್ವಾವಲಂಬಿ ಜೀವನ ನಡೆಸಬಹುದು. ಅದಕ್ಕಾಗಿ ಹೈನುಗಾರಿಕೆ, ಕುರಿ ಸಾಕಾಣಿಕೆ ಮತ್ತು ಉಣ್ಣೆ ಅಭಿವೃದ್ಧಿ ಮಾಡುವುದು ಹೆಚ್ಚು ಲಾಭದಾಯಕವಾಗಿವೆ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಶರಣು ಬಿ ತಳ್ಳಿಕೇರಿ ಹೇಳಿದರು.

ಪಟ್ಟಣದ ಕನಕಬಸವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕುರಿ ಸಾಕಾಣಿಕೆ ಕ್ಷೇಮಾಭಿವೃದ್ಧಿ ಸಂಘದ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರ ಕುರಿಗಾರರ ಹಿತ ರಕ್ಷಣೆ ಕಾಪಾಡಲು ಸಿದ್ದವಾಗಿದೆ. ಕುರಿಗಳು ಮೃತಪಟ್ಟರೆ ಪರಿಹಾರ ನೀಡಲಾಗುವುದು. ನಿಗಮ ಸಹಿತ ಕೇಂದ್ರ ಸರ್ಕಾರ ನಬಾರ್ಡ್‌ನ ಸಹಾಯದೊಂದಿಗೆ ಸಂಘಗಳಿಗೆ ಸಾಲ, ಸಹಾಯಧನ ನೀಡುವುದು. ಪಶು ಸಂಗೋಪನೆ ಇಲಾಖೆಯಿಂದ ಕುರಿಗಳಿಗೆ ಔಷಧ ವಿತರಣೆ, ಕುರಿಗಳ ಆರೋಗ್ಯ ರಕ್ಷಣೆ, ಲಸಿಕೆ ನೀಡಿಕೆ, ಜಂತು ನಾಶಕಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ವಿಮೆ ಸೌಲಭ್ಯ ಅನ್ವಯಿಸಲಾಗುವುದು ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಾಲೋಣಿ ಮಾತನಾಡಿ, ಕುರಿಗಾರರ ಸಂಘ ಅಸ್ಥಿತ್ವಕ್ಕೆ ಬಂದಿದ್ದು ಶ್ಲಾಘನಾರ್ಹ. ಸಂಘಗಳಿಂದ ಕುರಿಗಳ, ಕುರಿಗಾರರ ಹಿತ ರಕ್ಷಣೆ ಕಾಪಾಡಲು, ಭದ್ರತೆ ಒದಗಿಸಲು ಸಾಧ್ಯ. ಸಂಘಟನೆ ಆಯಾ ಸಮಾಜಗಳ ಹಿತ ರಕ್ಷಣೆಗೆ ಬದ್ದವಾಗಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಪ್ಪ ಆರಾಪುರ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹನುಮಂತಪ್ಪ ವಾಲೀಕಾರ, ಕುರುಬ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಶರಣಪ್ಪ ಮಾವಿನಮಡುಗು, ಎಪಿಎಂಸಿ ಸದಸ್ಯ ನಾಗರಾಜ್‌ ಅರಳಿ, ಮಾಜಿ ಸದಸ್ಯ ಶಿವಪ್ಪ ಬೇವಿನಾಳ, ಉಪನ್ಯಾಸಕ ಹನುಮಂತಪ್ಪ ಚಂದಲಾಪುರ ಪ್ರಮುಖರಾದ ಜಡಿಯಪ್ಪ ನವಲಿ, ಮರಿಯಪ್ಪ ಸಾಲೋಣಿ, ನಿರುಪಾದಿ ಮೈಲಾಪುರ, ಪಶು ವೈದ್ಯಾಧಿಕಾರಿ ಲಕ್ಷ್ಮಣ ನಾಯಕ, ರಾಮಚಂದ್ರ ವಕೀಲ, ಯಲ್ಲಪ್ಪ ಕುರಿ, ರಂಗನಾಥ ನಾಯಕ ಹೊಸ ಜೂರಟಗಿ, ನಿಂಗಪ್ಪ ದೇವರಮನಿ, ಫಕೀರಪ್ಪ, ಬಸವರಾಜ್‌ ಕೊಟ್ನೇಕಲ್‌, ರಮೇಶ, ಹನುಮೇಶ, ಯಮನೂರಪ್ಪ ಪನ್ನಾಪುರ, ಮರಿಯಪ್ಪಬರಗೂರು ಇದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ಪರಸಪ್ಪ ಪರಕಿ ಕಾರ್ಯಕ್ರಮ ನಿರ್ವಹಿಸಿದರು.
ಶಾಸಕ ಬಸವರಾಜ್‌ ದಢೇಸುಗೂರ ತುಂಗಭದ್ರಾ 31ನೇ ವಿತರಣಾ ನಾಲೆಯ ಬಳಿ ಸಂಘದ ನಾಮಫಲಕ ಅನಾವರಣಗೊಳಿಸಿದರು. ಡೊಳ್ಳು ಸಹಿತ ಇತರ ವಾದ್ಯಗಳೊಂದಿಗೆ ಮೆರವಣಿಗೆ ಆರಂಭಗೊಂಡು ಕನಕಬಸವ ಭವನಕ್ಕೆ ಆಗಮಿಸಿ ಮುಕ್ತಾಯಗೊಂಡಿತು. ಸಮಾಜದ ಜನರು ಬೈಕ್‌ ರ್‍ಯಾಲಿ ನಡೆಸಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.