
ಕನಕಗಿರಿ: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎನ್ನುವ ದಾಖಲೆಯನ್ನು ಸರಿಗಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ತಾಲ್ಲೂಕಿನ ನಾಗಲಾಪುರ, ಗೌರಿಪುರ ಗ್ರಾಮಗಳಲ್ಲಿ ಸಿಎಂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಅಂದು ದೇವರಾಜ ಅರಸು, ಇಂದು ಸಿದ್ದರಾಮಯ್ಯ ಎಂದು ಕೇಕ್ ಮೇಲೆ ಬರೆದು ಗಮನ ಸೆಳೆದರು. ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ, ಸಾಮಾಜಿಕ ಜಾಲ ತಾಣದ ಬ್ಲಾಕ್ ಉಪಾಧ್ಯಕ್ಷ ಸಂತೋಷ ಕುರಿ,‘ಸಿಎಂ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಯಾವುದೇ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸಿದ್ದಾರೆ. ಹಲವಾರು ಯೋಜನೆಗಳನ್ನು ಜಾರಿಗೆ ತಂದು ಎಲ್ಲಾ ವರ್ಗದವರ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ ಎಂದರು.
ಬಡ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ, ಆದಾಗ್ಯ ರಾಜಕೀಯ, ಸಾಮಾಜಿಕ ರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಗುಣಗಾನ ಮಾಡಿದರು. ಪ್ರಮುಖರಾದ ಶಾಮಣ್ಣ ಗೌಡ್ರು.ನೀಲಪ್ಪ ದಳಪತಿ. ಹನುಮಂತ ಗುರಿಕಾರ, ಹನುಮಂತ ಪೂಜಾರಿ, ಯಮನೂರಪ್ಪ ತರಲಕಟ್ಟಿ. ಪಿಡ್ಡಪ್ಪ ಜಗಲಿ.ಮುತ್ತಣ್ಣ ಕರಡಿ.ಯಮನೂರಗೌಡ ಮಾಲಿಪಾಟೀಲ, ಇಂದ್ರೇಶ ಬೋದೂರು, ಯಮನರಪ್ಪ ಗೋಲಿಗೇರಿ, ಕರಿಯಪ್ಪ ಅಬ್ಬಿಗೇರಿ, ಸತೀಶ ರೆಡ್ಡಿ, ದುರಗಪ್ಪ ಹೊಸಕೇರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.