ADVERTISEMENT

ಸಿಲಂಬಮ್: ಕೊಪ್ಪಳ ಜಿಲ್ಲೆ ಚಾಂಪಿಯನ್‌

ರಾಜ್ಯಮಟ್ಟದ ಪಿಯು ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:07 IST
Last Updated 24 ನವೆಂಬರ್ 2022, 4:07 IST
ಹನುಮಸಾಗರದ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಮಂಗಳವಾರ ಜಂಪ್‍ರೋಪ್ ಹಾಗೂ ಸಿಲಂಬಮ್(ದೊಣ್ಣೆವರಸೆ) ಪಂದ್ಯಾಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ಹನುಮಸಾಗರದ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ಮಂಗಳವಾರ ಜಂಪ್‍ರೋಪ್ ಹಾಗೂ ಸಿಲಂಬಮ್(ದೊಣ್ಣೆವರಸೆ) ಪಂದ್ಯಾಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು   

ಹನುಮಸಾಗರ: ಇಲ್ಲಿನ ಕರಿಸಿದ್ದೇಶ್ವರ ಸಭಾ ಮಂಟಪದಲ್ಲಿ ಮಂಗಳವಾರ ಮುಕ್ತಾಯವಾದ ಪಿಯು ಕಾಲೇಜು ವಿದ್ಯಾರ್ಥಿಗಳ ರಾಜ್ಯ
ಮಟ್ಟದ ಜಂಪ್‍ರೋಪ್ ಹಾಗೂ ಸಿಲಂಬಮ್(ದೊಣ್ಣೆವರಸೆ) ಪಂದ್ಯಾಟಗಳಲ್ಲಿ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದುಕೊಂಡರು.

ಕೊಪ್ಪಳ ಜಿಲ್ಲೆ ಸೀಲಂಬಮ್(ದೊಣ್ಣೆವರಸೆ)ಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಧಾರವಾಡ ದ್ವಿತೀಯ, ಮೈಸೂರು ಜಿಲ್ಲೆ ತೃತೀಯ ಸ್ಥಾನ ಪಡೆದಿವೆ. ಜಂಪ್‌ ರೋಪ್‌ನಲ್ಲಿ ಬಳ್ಳಾರಿ ಜಿಲ್ಲೆ (ಪ್ರಥಮ), ಕೊಪ್ಪಳ ಜಿಲ್ಲೆ (ದ್ವಿತೀಯ) ಮತ್ತು ದಕ್ಷಿಣ ಕನ್ನಡ (ತೃತೀಯ) ಸ್ಥಾನ ಪಡೆದಿವೆ.

ಸೀಲಂಬಮ್ (ಬಾಲಕರ ವಿಭಾಗ): ಸ್ವಾರ್ಡ್ ಸ್ವಿಂಗ್ ವಿಭಾಗದಲ್ಲಿ ಮಹೇಶ ಕೊಪ್ಪಳ (ಪ್ರಥಮ), ಸುಲೇಮಾನ್ ಬೀದರ (ದ್ವಿತೀಯ), ಸ್ಪೀಯರ್ ಸ್ಟಿಕ್ ಸ್ವಿಂಗ್ ವಿಭಾಗದಲ್ಲಿ ಧ್ಯಾನ್ ಶಿರಿಗೇರಿ ಕೊಪ್ಪಳ(ಪ್ರಥಮ), ರೋಹಿತ ಬೀದರ(ದ್ವಿತೀಯ), ಡಬಲ್ ಸ್ಟಿಕ್‍ನಲ್ಲಿ ಮುತ್ತಪ್ಪ ಮೈಸೂರು(ಪ್ರಥಮ), ಶ್ರೀಧರ.ಕೆ. ಧಾರವಾಡ(ದ್ವಿತೀಯ), ಸಿಂಗಲ್ ಸ್ಟಿಕ್ ವಿಭಾಘದಲ್ಲಿ ರವಿ ಮಹಾದೇವಪ್ಪ ಧಾರವಾಡ(ಪ್ರಥಮ), ತೌಫಿಕ್.ವಿ. ಕೊಪ್ಪಳ(ದ್ವಿತೀಯ).

ADVERTISEMENT

ಸೀಲಂಬಮ್ (ಬಾಲಕಿಯರ ವಿಭಾಗ): ಸ್ವಾರ್ಡ್ ಸ್ಟಿಕ್ ಫೈಟ್ ವಿಭಾಗದಲ್ಲಿ ಸುನಿತಾ.ಪಿ. ಕೊಪ್ಪಳ (ಪ್ರಥಮ), ಕೋಮಲ್ ಬೀದರ(ದ್ವಿತೀಯ), ಸ್ವಾರ್ಡ್ ಸ್ವಿಂಗ್ ವಿಭಾಗದಲ್ಲಿ ಕಾವೇರಿ ಧಾರವಾಡ(ಪ್ರಥಮ), ಅಪರ್ಣ.ಬಿ. ಬೆಳಗಾವಿ(ದ್ವಿತೀಯ), ಸ್ಪೀಯರ್ ಸ್ಟಿಕ್ ಸ್ವಿಂಗ್ ವಿಭಾಗ: ಹುಲಿಗೆಮ್ಮ ಕೊಪ್ಪಳ (ಪ್ರಥಮ), ಅನುಷಾ ಬೆಂಗಳೂರು ಉತ್ತರ(ದ್ವಿತೀಯ), ಸ್ಟಿಕ್ ಸ್ವಿಂಗ್‍ನಲ್ಲಿ ಈರಮ್ಮ ಕೊಪ್ಪಳ(ಪ್ರಥಮ), ರೀತು.ಎಂ.ಪಿ. ಮೈಸೂರು(ದ್ವಿತೀಯ), ಸಿಂಗಲ್ ಸ್ಟಿಕ್ ವಿಭಾಗದಲ್ಲಿ ತನುಶ್ರೀ.ಬಿ. ಮೈಸೂರು(ಪ್ರಥಮ), ಸುರಭಿ.ಟಿ. ವಿಜಯಪುರ(ದ್ವಿತೀಯ) ಸ್ಥಾನ ಪಡೆದುಕೊಂಡರು

ಜಂಪ್ ರೋಪ್ (ಬಾಲಕರ ವಿಭಾಗ): 30 ಸೆಕೆಂಡ್ಸ್ ಸ್ಪೀಡ್‍ನಲ್ಲಿ ಅಜಿಮ್ ವಿಜಯನಗರ (ಪ್ರಥಮ), ಶ್ರೀಶ ಕೊಪ್ಪಳ (ದ್ವಿತೀಯ), 30 ಸೆಕೆಂಡ್ ಡಬಲ್ ಅಂಡರ್‌ನಲ್ಲಿ ಅಜಿತ್‌ ಕಲ್ಮಡಿ ಬಾಗಲಕೋಟೆ (ಪ್ರಥಮ), ಶಿವಕುಮಾರ ಬಳ್ಳಾರಿ(ದ್ವಿತೀಯ), 30 ಮಿನಿಟ್ ಎಂಡುರನ್ಸ್‍ನಲ್ಲಿ ರಿತೇಶ ಕುದರಿಮೋತಿ ಬಳ್ಳಾರಿ (ಪ್ರಥಮ), ಉಮೇಶ.ಸಿ. ಬೆಳಗಾವಿ(ದ್ವಿತೀಯ), ಫ್ರೀಸ್ಟೈಲ್‍ನಲ್ಲಿ ರಿಷಿಕುಮಾರ ಬಳ್ಳಾರಿ (ಪ್ರಥಮ), ಸೃಜನ್ ದಕ್ಷಿಣ ಕನ್ನಡ (ದ್ವಿತೀಯ), ಸ್ಪೀಡ್ ರಿಲೇನಲ್ಲಿ ಸಚಿನ್, ಪ್ರದೀಪ, ಕೃಷ್ಣ, ಪ್ರವೀಣ ಗದಗ(ಪ್ರಥಮ), ಸೂರಜ್, ಮುಜಾಫರ್, ಎಚ್.ಎನ್.ಜಯಂತ, ಶಶಿಧರ ವಿಜಯನಗರ(ದ್ವಿತೀಯ) ಸ್ಥಾನ ಪಡೆದುಕೊಂಡರು.

ಜಂಪ್ ರೋಪ್ (ಬಾಲಕಿಯರ ವಿಭಾಗ): 30 ಸೆಕೆಂಡ್ ಸ್ಪೀಡ್‍ನಲ್ಲಿ ದೀಪ್ತಿ ಬಳ್ಳಾರಿ (ಪ್ರಥಮ), ನಂದಿನಿ.ಎಚ್. ಬೆಳಗಾವಿ(ದ್ವಿತೀಯ), 30 ಸೆಕಂಡ್ ಡಬಲ್ ಅಂಡರ್‍ನಲ್ಲಿ ಚಿನ್ಮಯಿ ದೇಶಪಾಂಡೆ ಉಡುಪಿ(ಪ್ರಥಮ), ಪ್ರೇರಣಾ.ಟಿ.ಎನ.ಬೆಂಗಳೂರು(ದ್ವಿತೀಯ).

30 ಮಿನಿಟ್ ಎಂಡುರನ್ಸ್‍ನಲ್ಲಿ ಯಶಸ್ವಿನಿ ದಕ್ಷಿಣ ಕನ್ನಡ(ಪ್ರಥಮ), ಶಮ್‍ಶಾದ್.ಎಮ್. ಕೊಪ್ಪಳ(ದ್ವಿತೀಯ), 75 ಸೆಕಂಡ್ ಫ್ರೀಸ್ಟೈಲ್‍ನಲ್ಲಿ ವಿಜಯಲಕ್ಷ್ಮೀ ಕೊಪ್ಪಳ(ಪ್ರಥಮ), ರಕ್ಷಿತಾ ಬಾಗಲಕೋಟೆ(ದ್ವಿತೀಯ). ಸ್ಪೀಡ್ ರಿಲೇಯಲ್ಲಿ ಅನನ್ಯ, ಮಂಜುಳಾ.ಡಿ.ಸಿ, ಬಸಮ್ಮ, ಸೃಷ್ಟಿ ದಾವಣಗೇರೆ(ಪ್ರಥಮ), ನಂದಿನಿ, ಅನುಷ್ಕಾ, ಕೃಷ್ಣವೇಣಿ, ಬಿಬಿಯಾಮೀನ ಬಾಗಲಕೋಟೆ(ದ್ವಿತೀಯ), ಡಬಲ್ ಅಂಡರ್ ರಿಲೇನಲ್ಲಿ ಕೆ.ತೇಜಶ್ವರಿ, ನೀಲಾವತಿ, ಪ್ರತೀಕ್ಷಾ.ಜಿ. ಸಾನಿಯಾ.ಎಸ್ ಬೆಂಗಳೂರು ಉತ್ತರ(ಪ್ರಥಮ), ಕವಿತಾ, ರಕ್ಷಿತಾ, ಪದ್ಮಾವತಿ, ಚೈತ್ರಾ ಕೊಪ್ಪಳ(ದ್ವಿತೀಯ) ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.