ADVERTISEMENT

ಕೊಪ್ಪಳ | ಒಂದೇ ಕುಟುಂಬದ ಮೂವರು ಸಾವು; ಕುಟುಂಬದವರಿಗೆ ಗವಿಶ್ರೀ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 8:53 IST
Last Updated 24 ಆಗಸ್ಟ್ 2024, 8:53 IST
<div class="paragraphs"><p>ಅಂತಿಮ ನಮನ ಸಲ್ಲಿಸಿದ&nbsp;ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ,&nbsp;ನೋವಿನಲ್ಲಿದ್ದ ಕುಟುಂಬದವರಿಗೆ ಧೈರ್ಯ ತುಂಬಿದರು.</p></div>

ಅಂತಿಮ ನಮನ ಸಲ್ಲಿಸಿದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ನೋವಿನಲ್ಲಿದ್ದ ಕುಟುಂಬದವರಿಗೆ ಧೈರ್ಯ ತುಂಬಿದರು.

   

ಕೊಪ್ಪಳ: ಹುಬ್ಬಳ್ಳಿ ಸಮೀಪದ ಹೆಬಸೂರು ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೊಪ್ಪಳ ಸಮೀಪದ ಮಂಗಳಾಪುರ ಗ್ರಾಮದ ಒಂದೇ ಕುಟುಂಬದ ಮೂವರ ಅಂತಿಮ ಸಂಸ್ಕಾರ ಶನಿವಾರ ನೆರವೇರಿತು. ಗ್ರಾಮಕ್ಕೆ ಭೇಟಿ ನೀಡಿದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದ ಸ್ವಾಮೀಜಿ ನೋವಿನಲ್ಲಿದ್ದ ಕುಟುಂಬದವರಿಗೆ ಧೈರ್ಯ ತುಂಬಿದರು. ಅಲ್ಲಿದ್ದ ಜನರಿಂದ ಘಟನೆ ಹೇಗೆ ಸಂಭವಿಸಿತು ಎನ್ನುವ ಮಾಹಿತಿ ಪಡೆದುಕೊಂಡರು.

ADVERTISEMENT

ಈ ಅಪಘಾತದಲ್ಲಿ ಜಾಫರ್‌ ಸಾಬ್‌ (64), ಮಹಮ್ಮದ್‌ ಮುಸ್ತಫಾ (38) ಮತ್ತು ಶೋಯಬ್‌ (8) ಮೃತಪಟ್ಟಿದ್ದು, ಇನ್ನು ಮೂವರು ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.