ADVERTISEMENT

ತಾವರಗೇರಾ: ಭಕ್ತಿಯ ಶ್ರೀನಿವಾಸ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:36 IST
Last Updated 3 ಫೆಬ್ರುವರಿ 2026, 5:36 IST
ತಾವರಗೇರಾ ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು
ತಾವರಗೇರಾ ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು   

ತಾವರಗೇರಾ: ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಆರ್ಯವೈಶ್ಯ ಸಮಾಜ ಮತ್ತು ಶೇಷಾದ್ರಿ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ವೆಂಕಟೇಶ್ವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಪಟ್ಟಣದ ನರಹರಿ ದೇವಸ್ಥಾನದಿಂದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ವರೆಗೆ ಪದ್ಮಾವತಿ ಮತ್ತು ಲಕ್ಷ್ಮೀ ಶ್ರೀನಿವಾಸ ಮೂರ್ತಿ ಮೆರವಣಿಗೆ ಸಲಕ ವಾದ್ಯ ಮೇಳದೊಂದಿಗೆ ಜರುಗಿತು.

ಸಂಜೆ ತಿರುಪತಿ ತಿಮ್ಮಪ್ಪನ ಪೂಜಾ ಸಂಪ್ರದಾಯದಂತೆ ಪುರೋಹಿತರಿಂದ ಮಂತ್ರ ಜಪ, ಪೂಜೆಯೊಂದಿಗೆ ಕಲ್ಯಾಣೋತ್ಸವ ಜರುಗಿತು. ಪಟ್ಟಣದ ಎಲ್ಲಾ ಸಮುದಾಯದ ಭಕ್ತರು ಔದಿಕೆ ಮುಂಭಾಗದಲ್ಲಿ ಕುಳಿತು ಕಲ್ಯಾಣೋತ್ಸವ ಕಾರ್ಯಕ್ರಮ ವೀಕ್ಷಿಸಿದರು.

ADVERTISEMENT

ಶೇಷಾಧ್ರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಆರ್ಯ ವೈಶ್ಯ ಸಮಾಜದ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.