ADVERTISEMENT

‘ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:49 IST
Last Updated 23 ಫೆಬ್ರುವರಿ 2020, 10:49 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಕೊಪ್ಪಳ: ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಬೇಕಿದೆ. ಈ ಕಾರಣಕ್ಕೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಕೂಡಲೇ ಮಾಡದಿದ್ದರೆ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ‌, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕ್ಯಾಶಿನೋ ತೆರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಈ ಕಾರಣಕ್ಕೆ ಏನೇನೋ ಮಾಡುತ್ತಿದ್ದಾರೆ. ಸಿ.ಟಿ.ರವಿ ಹೀಗೆ ಏನೇನೋ ಮಾಡುತ್ತಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ ಎಂದು ಹಿಂದೆ ನಾವೇ ಹೇಳುತ್ತಿದ್ದೆವು. ಏಕೆಂದರೆ ವಾಜಪೇಯಿ ಅವರು ಇದ್ದಾಗ ಇದು ಶಿಸ್ತಿನ ಪಕ್ಷ ಆಗಿತ್ತು. ಈಗ ಆ ಪರಿಸ್ಥಿತಿ ಇಲ್ಲ
ಎಂದರು.

ADVERTISEMENT

ಕೆಪಿಸಿಸಿ ಅಧ್ಯಕ್ಷರ ನೇಮಕಾತಿಯಲ್ಲಿ ವಿಳಂಬ ಆಗುತ್ತದೆ. ಒಂದು ಅವರೇ ಮುಂದವರೆಯಬೇಕು. ಇಲ್ಲವಾದರೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಬೇಕು. ಇದು ನಮ್ಮ ಒತ್ತಾಯವೂ ಕೂಡ ಆಗಿದೆ
ಎಂದರು.

ರಮೇಶ ಜಾರಕಿಹೊಳಿಗೆ ಬೃಹತ್ ನೀರಾವರಿ ಖಾತೆ ನೀಡಿದ್ದಾರೆ. ಆದರೆ ಅವನಿಗೆ ಈ ಖಾತೆ ನಿಭಾಯಿಸುವುದು ಕಷ್ಟ ಅನ್ನಿಸುತ್ತದೆ. ಕಾನೂನಾತ್ಮಕ ಸಮಸ್ಯೆಗಳು ಇರುತ್ತವೆ. ನಿಭಾಯಿಸುವುದು ಕಷ್ಟವಾಗಬಹುದು. ಆದರೂ ಹೇಗೆ ನಿಭಾಯಿಸುತ್ತಾನೆ ಎಂದು ಕಾದು ನೋಡಬೇಕಿದೆ. ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ. ಬಿಜೆಪಿಗೆ ಹೋಗಿದ್ದಾರೆ, ಆ ಪಕ್ಷದ ನಿಲುವಿಗೆ ಅಂಟಿಕೊಂಡು ಇರಬೇಕು. ಮತ್ತೆ 20 ಜನರನ್ನು ಕಟ್ಟಿಕೊಂಡು ಹೊರಗೆ ಬರುತ್ತೇವೆ ಎಂದರೆ ಅದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.