ADVERTISEMENT

‘ಬೇಸಿಗೆ ಶಿಬಿರದಿಂದ ಅನುಕೂಲ’

​ಪ್ರಜಾವಾಣಿ ವಾರ್ತೆ
Published 29 ಮೇ 2022, 12:59 IST
Last Updated 29 ಮೇ 2022, 12:59 IST
ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ವಿಶ್ವಬಂಧು ಗುರುಬಳಗದ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು
ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ವಿಶ್ವಬಂಧು ಗುರುಬಳಗದ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು   

ಕುಕನೂರು: ‘ಕೋವಿಡ್ ಕಾರಣಕ್ಕೆ ಉಂಟಾಗಿರುವ ಕಲಿಕಾ ಅಂತರ ಸರಿದೂಗಿಸಲು ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ’ ಎಂದು ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಅಭಿ‍ಪ್ರಾಯಪಟ್ಟರು.

ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ವಿಶ್ವ ಬಂಧು ಸೇವಾ ಗುರುಬಳಗದ ವತಿಯಿಂದ ನಡೆದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವ ಕ್ರಿಯಾಶೀಲ ಶಿಕ್ಷಕರು ಒಂದು ತಂಡವಾಗಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದೀರಿ, ಮತ್ತಷ್ಟು ಸಮಾಜಮುಖಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ಪ್ರಗತಿಪರ ರೈತ ಮುಖಂಡ ರಸೂಲಸಾಬ ದಮ್ಮೂರ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕ ಪಡೆದ ಮಂಜುನಾಥ ಗಾಣಿಗೇರ, ಸುಪ್ರಿಯಾ ಪೂಜಾರ ಹಾಗೂ ತೇಜಸ್ವಿನಿ ಹುಳ್ಳಿ ಅವರನ್ನು ಸನ್ಮಾನಿಸಲಾಯಿತು.

625 ಕ್ಕೆ 620 ಅಂಕಗಳಿಸಿದ ಅಲೆಮಾರಿ ಸಮುದಾಯದ ವಿದ್ಯಾರ್ಥಿನಿ ಪೂಜಾ ಜೋಗಿ ಅವರನ್ನು ಗೌರವಿಸಲಾಯಿತು.

ಸಿದ್ದಲಿಂಗಪ್ಪ ಶ್ಯಾಗೋಟಿ, ಮಾರುತಿ ಹಾದಿಮನಿ, ಪ್ರಭಯ್ಯ ಬಳಗೇರಿಮಠ, ಮಹಾವೀರ ಕಲ್ಭಾವಿ, ಪರಶುರಾಮ, ಪ್ರಶಾಂತ ಕಂದಗಲ್, ಶಂಕರ್ ಹಳ್ಳಿ, ಬಾಬುಸಾಬ ಗುಡಿಹಿಂದಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶ, ಉಪಾಧ್ಯಕ್ಷ ರಾಘವೇಂದ್ರ ಹುಳ್ಳಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ, ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ ತಳವಾರ, ಶರಣಯ್ಯ ಸರಗಣಾಚಾರ, ಸದ್ದಾಂ ಹುಸೇನ್ ಹ್ಯಾಟಿ, ಸುರೇಶ ಮಡಿವಾಳರ, ಮೈಲಾರಗೌಡ ಹೊಸಮನಿ, ಶರಣಪ್ಪಗೌಡ ಡಂಬ್ರಳ್ಳಿ, ಹನಮಂತಪ್ಪ ಅಂಬಳಿ ಹಾಗೂ ಮುಖ್ಯಶಿಕ್ಷಕ ಶಂಕ್ರಪ್ಪ ಕವಡಿಮಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.