ADVERTISEMENT

ದಾಖಲೆಗಳನ್ನು ಪರಿಶೀಲಿಸಿ ನಾಮಪತ್ರ ಪಡೆಯಿರಿ: ಎಂ.ರೇಣುಕಾ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 13:44 IST
Last Updated 9 ಡಿಸೆಂಬರ್ 2020, 13:44 IST
ಗಂಗಾವತಿ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಚುನಾವಣಾಧಿಕಾರಿಗಳ ಸಭೆ ನಡೆಯಿತು
ಗಂಗಾವತಿ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಚುನಾವಣಾಧಿಕಾರಿಗಳ ಸಭೆ ನಡೆಯಿತು   

ಗಂಗಾವತಿ: ‘ಗ್ರಾಮ ಪಂಚಾಯಿತಿ ಚುನಾವಣೆಗೆ ತಾಲ್ಲೂಕಿನಲ್ಲಿ ಡಿ.11 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಚುನಾವಣಾಧಿಕಾರಿಗಳು ಅಭ್ಯರ್ಥಿಗಳ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ, ನಾಮಪತ್ರ ಪಡೆಯಬೇಕು’ ಎಂದು ತಹಶೀಲ್ದಾರ್‌ ಎಂ.ರೇಣುಕಾ ಸೂಚಿಸಿದರು.

ನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ನಾಮಪತ್ರ ಸ್ವೀಕರಿಸುವಾಗ ಗೊಂದಲಕ್ಕೆ ಒಳಗಾಗಬಾರದು. ಕೋವಿಡ್‌ ನಿಯಮಗಳನ್ನು ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಿದರು.

ADVERTISEMENT

ನೋಡಲ್‌ ಅಧಿಕಾರಿ‌ ನಾಗರಾಜ್‌ ಮಾತನಾಡಿ ಮತ ಪತ್ರದ ನಮೂನೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳ ಚುನಾವಣಾಧಿಕಾರಿಗಳಿಗೆ ಮತ ಪತ್ರದ ನಮೂನೆಗಳನ್ನು ಹಾಗೂ ಕೋವಿಡ್‌ ಸುರಕ್ಷಾ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ತಾಲ್ಲೂಕು ಆಡಳಿತ ಸಿಬ್ಬಂದಿ ಹಾಗೂ ಚುನಾವಣಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.