
ತಾವರಗೇರಾ: ಶಾಲೆಯ ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸುವ ಮೂಲಕ ಜ್ಞಾನ ಹೆಚ್ಚಿಸಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಗುರುಕುಲ ಪಾಠಶಾಲೆ ಕಾರ್ಯದರ್ಶಿ ನಾಗರಾಜ ಓಲಿ ಹೇಳಿದರು.
ಸ್ಥಳೀಯ ಗುರುಕುಲ ಪಾಠಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
‘ಶಾಲಾ ಕೊಠಡಿಗಳಲ್ಲಿ ವಿಜ್ಞಾನ, ಗಣಿತ, ಸಮಾಜ, ಪ್ರಾಯೋಗಿಕತೆ ಹೀಗೆ ವಿವಿಧ ಚಟುವಟಿಕೆಗಳ ವಸ್ತು ಪ್ರದರ್ಶನವನ್ನು ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು ವಿಕ್ಷಣೆ ಮಾಡಿದರು.
ತಾವರಗೇರಾ ವಲಯ ಸಂಪನ್ಮೂಲ ಅಧಿಕಾರಿ ಕಾಶಿನಾಥ ನಾಗಲಿಕರ, ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಶಿವುಕುಮಾರ ದುಮತಿ, ಆಡಳಿತಾಧಿಕಾರಿ ಲಕ್ಷ್ಮಣ ವಗರನಾಳ, ಪ.ಪಂ ಸದಸ್ಯ ದಶರಥ ದೇವದುರ್ಗ, ಪೋಷಕರು ವಿದ್ಯಾರ್ಥಿಗಳು ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.