ADVERTISEMENT

ಕುಷ್ಟಗಿ: ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:07 IST
Last Updated 24 ನವೆಂಬರ್ 2020, 3:07 IST
ಕುಷ್ಟಗಿಯಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ವೆಂಕಟೇಶ ಕೊಂಕಲ್ ಮಾತನಾಡಿದರು
ಕುಷ್ಟಗಿಯಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ವೆಂಕಟೇಶ ಕೊಂಕಲ್ ಮಾತನಾಡಿದರು   

ಕುಷ್ಟಗಿ: ಇಲ್ಲಿನ ವಿದ್ಯಾನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಮತ್ತು ಐದನೇ ತರಗತಿ ಬೋಧಿಸುವ ಶಿಕ್ಷಕರಿಗೆ ವಿಷಯಾಧಾರಿತ ತರಬೇತಿ ಕಾರ್ಯಾಗಾರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಯಟ್ ಉಪನ್ಯಾಸಕ ವೆಂಕಟೇಶ ಕೊಂಕಲ್,‘ಪ್ರತಿಯೊಬ್ಬ ಶಿಕ್ಷಕರು ವೃತ್ತಿಪರ ಅಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತ್ನಿಸಬೇಕು. ನಿರಂತರ ಓದು ಮತ್ತು ಉತ್ತಮ ಚಿಂತನೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಬಿಆರ್‌ಸಿ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ,‘ಶಿಕ್ಷಕರು ತರಬೇತಿಯಲ್ಲಿ ಪಡೆದ ಉತ್ತಮ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಹೆಚ್ಚು ಮುತುವರ್ಜಿ ವಹಿಸುವುದು ಸೂಕ್ತ. ಪ್ರತಿಯೊಂದು ತರಬೇತಿಗಳು ಶಿಕ್ಷಕರ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸುತ್ತವೆ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜಸಾಬ್ ನದಾಫ್, ಜೀವನ್ ಸಾಬ್ ವಾಲಿಕಾರ, ಸಿಆರ್‌ಪಿಗಳಾದ ನಾಗರಾಜ ಚನ್ನಪ್ಪನವರ, ಸೋಮಲಿಂಗಪ್ಪ ಗುರಿಕಾರ, ರಾಘವೇಂದ್ರ ಮೇದಿಕೇರಿ. ಹಾಗೂ ಕುಷ್ಟಗಿ ಮತ್ತು ಮುದೇನೂರು ಕ್ಲಸ್ಟರ್ ಗಳ ಶಿಕ್ಷಕರು
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.