ADVERTISEMENT

ಕಲ್ಲಭಾವಿ ಮಾರುತೇಶ್ವರನ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 4:56 IST
Last Updated 10 ಜನವರಿ 2026, 4:56 IST
ಯಲಬುರ್ಗಾ ತಾಲ್ಲೂಕು ಕಲ್ಲಭಾವಿ ಗ್ರಾಮದ ಮಾರುತೇಶ್ವರ ಜಾತ್ರೆಯ ಪ್ರಯುಕ್ತ ನಡೆದ ಅದ್ದೂರಿ ರಥೋತ್ಸವದಲ್ಲಿ ಹಲವು ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು
ಯಲಬುರ್ಗಾ ತಾಲ್ಲೂಕು ಕಲ್ಲಭಾವಿ ಗ್ರಾಮದ ಮಾರುತೇಶ್ವರ ಜಾತ್ರೆಯ ಪ್ರಯುಕ್ತ ನಡೆದ ಅದ್ದೂರಿ ರಥೋತ್ಸವದಲ್ಲಿ ಹಲವು ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು   

ಯಲಬುರ್ಗಾ: ತಾಲ್ಲೂಕಿನ ಕಲ್ಲಭಾವಿ ಗ್ರಾಮದ ಮಾರುತೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಅದ್ದೂರಿ ರಥೋತ್ಸವ ನೆರವೇರಿತು. ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ ಹಾಗೂ ಹೋಮ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಸಂಜೆ ನಡೆದ ಗೊಲ್ಲರ ಹರಕೆ ಸಂಸ್ಕೃತಿ ಹಾಲೋಕಳಿಯು ಅದ್ದೂರಿಯಾಗಿ ಜರುಗಿತು. ಸಾಕಷ್ಟು ಸಂಖ್ಯೆಯಲ್ಲಿದ್ದ ಗೊಲ್ಲರ ಸಮಾಜದವರು ಸಂಗ್ರಹಿಸಿಟ್ಟಿದ್ದ ಹಾಲನ್ನು ರಥೋತ್ಸವ ನಡೆಯುವ ಪ್ರದೇಶದಲ್ಲಿ ಓಕಳಿ ಆಡುವ ಮೂಲಕ ಹರಕೆ ತೀರಿಸಿದ್ದು ಗಮನ ಸೆಳೆಯಿತು. ನಂತರ ನಡೆದ ಮಹಾರಥೋತ್ಸವ ವೈಭವದಿಂದ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳಾದ ಪುಟಗಮರಿ, ಗಾಣದಾಳ, ತಾಳಕೇರಿ, ಚಿಕ್ಕವಂಕಲಕುಂಟಾ ಹಿರೇವಂಕಲಕುಂಟಾ ಮರಕಟ್ ಮಾಟಲದಿನ್ನಿ, ವಜನಭಾವಿ, ಚೌಡಾಪುರ, ಯಡ್ಡೋಣಿ, ಕಂದಕೂರ, ಚಿಕ್ಕಮನ್ನಾಪೂರ, ಸಿಡ್ಲಭಾವಿ ಸೇರಿ ವಿವಿಧ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಕುಷ್ಟಗಿ ಮದ್ದಾನೇಶ್ವರ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಮಲ್ಲಯ್ಯತಾತ ಸೋಮನಾಳ, ವಿರೂಪಾಕ್ಷಯ್ಯತಾತ, ಹನಮಂತಪ್ಪ ಕುಂಟೆಪ್ಪಜ್ಜ, ಅರ್ಚಕ ಮುಕ್ಕುಂದಪ್ಪ ಪೂಜಾರ ರಥೋತ್ಸವ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ಜಗದೀಶಪ್ಪ ಸಿದ್ದಾಪುರ, ದ್ಯಾಮಣ್ಣ ದೇವಲ್, ಬಸನಗೌಡ ಮಾಲಿಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದೇವಪ್ಪ ವಜ್ರದ, ಮಾಕರ್ಂಡೇಪ್ಪ ಹುಣಶಿಹಾಳ, ಶರಣಮ್ಮ ಕಡೆಮನಿ, ಹನುಮಂತಪ್ಪ ಎಸ್ ದೇವಲ್, ಕಟ್ಟೆಪ್ಪ ತಳವಾರ, ಶಾಮಣ್ಣ ಗದ್ದಿ, ಮಾರ್ಕಂಡೆಪ್ಪ ಮೇಟಿ, ಹನುಮೇಶ ಬ್ಯಾಳಿ ಸೇರಿ ಅನೇಕರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.