ADVERTISEMENT

‘ಗುಂಪುಚರ್ಚೆಗೆ ವಿಷಯಾಧಾರಿತ ಕಾರ್ಯಾಗಾರ ಪೂರಕ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 12:34 IST
Last Updated 24 ಸೆಪ್ಟೆಂಬರ್ 2022, 12:34 IST
ಕೊಪ್ಪಳದಲ್ಲಿ ಶನಿವಾರ ನಡೆದ ಪಿಯು ಕಾಲೇಜುಗಳ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಜಿ. ಎಂ ಭೂಸನೂರುಮಠ ಉದ್ಘಾಟಿಸಿದರು
ಕೊಪ್ಪಳದಲ್ಲಿ ಶನಿವಾರ ನಡೆದ ಪಿಯು ಕಾಲೇಜುಗಳ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಜಿ. ಎಂ ಭೂಸನೂರುಮಠ ಉದ್ಘಾಟಿಸಿದರು   

ಕೊಪ್ಪಳ: ‘ವಿದ್ಯಾರ್ಥಿಗಳು ಗುಂಪುಚರ್ಚೆ ಮಾಡಲು ವಿಷಯಾಧಾರಿತ ಕಾರ್ಯಾಗಾರ ಪೂರಕವಾಗಿವೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಂ ಭೂಸನೂರುಮಠ ಹೇಳಿದರು.

ಇಲ್ಲಿನ ಜ್ಞಾನಬಂಧು ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪಿಯು ಕಾಲೇಜುಗಳ ವಿಷಯಾಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ‘ಜಿಲ್ಲೆಯಲ್ಲಿರುವ ಶಿಕ್ಷಕರ ಪರಿಶ್ರಮದಿಂದ ಪಿಯುಸಿ ಫಲಿತಾಂಶ ಏರುಮುಖವಾಗಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಥಮಸ್ಥಾನ ಗಳಿಸಲು ಎಲ್ಲರೂ ಶ್ರಮಿಸಬೇಕು’ ಎಂದರು.

ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ್ ಗೌಡ ಮಾತನಾಡಿದರು. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಜಿ, ಜ್ಞಾನಬಂಧು ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು,ಮಾರುತಿ ಲಕಮಾಪುರ, ಪ್ರಾಚಾರ್ಯರಾದ ರಾಜಶೇಖರ್ ಪಾಟೀಲ್, ಈಶಪ್ಪ ಮಳಗಿ, ವಿಶ್ವನಾಥ್, ಜಿಲ್ಲೆಯ ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.