ADVERTISEMENT

ಅಂಗವಿಕಲರಿಗೆ ಟ್ರೈಸಿಕಲ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 11:38 IST
Last Updated 7 ಏಪ್ರಿಲ್ 2021, 11:38 IST
ಹನುಮಸಾಗರ ಸಮೀಪದ ಹೂಲಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಂಗವಿಕಲರಿಗೆ ಟ್ರೈಸಿಕಲ್‌ ವಿತರಿಸಲಾಯಿತು
ಹನುಮಸಾಗರ ಸಮೀಪದ ಹೂಲಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಂಗವಿಕಲರಿಗೆ ಟ್ರೈಸಿಕಲ್‌ ವಿತರಿಸಲಾಯಿತು   

ಹೂಲಗೇರಿ (ಹನುಮಸಾಗರ): ಹೂಲಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಬುಧವಾರ 8 ಜನ ಅಂಗವಿಕಲರಿಗೆ ಟ್ರೈಸಿಕಲ್ ವಿತರಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಬಂಡರಗಲ್ ಮಾತನಾಡಿ,‘ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಗ್ರಾ.ಪಂ ವತಿಯಿಂದ ಅಂಗವಿಕಲ ಫಲಾನುಭವಿಗಳಿಗೆ ಟ್ರೈಸಿಕಲ್ ವಿತರಣೆ ಮಾಡಲಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಯಂಕನಗೌಡರ, ಉಪಾಧ್ಯಕ್ಷ ಹನುಮಂತ ಗೊರಬಾಳ, ಸದಸ್ಯರಾದ ಶಾಂತಮ್ಮ ಕುಂಟಗೌಡ್ರ, ಗುರುಪಾದಪ್ಪ ಬೀಳಗಿ, ಮಹಿಬೂಬಸಾಬ ಉಂಡಿ, ದಾದೀಬಿ ಗಾಜಿಬಾಯಿ, ಸಿಂಧೂರ ವಡ್ಡರ, ಸುರೇಶ ಬಲಕುಂದಿ, ಕವಿತಾ ಚೌವಾಣ್, ಬಸವರಾಜ ಗೋನಾಳ, ನೀಲವ್ವ ಮ್ಯಾಗಳಮನಿ, ಲಕ್ಷ್ಮಿಬಾಯಿ ಚೌರದ, ರವಿಕುಮಾರ್ ಚೌವಾಣ್, ವಿಜಯಲಕ್ಷ್ಮಿ ತುಂಬದ ಹಾಗೂ ಗಂಗಮ್ಮ ಕಮತಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.