ಕೊಪ್ಪಳ: ನಗರದಲ್ಲಿ ಶುಕ್ರವಾರ ಸುರಿದ ಜೋರು ಮಳೆಯಿಂದಾಗಿ ಇಲ್ಲಿನ 12ನೇ ವಾರ್ಡಿನ ಸಜ್ಜಿ ಹೊಲ ಬಡಾವಣೆಯಲ್ಲಿ ಸುನೀತ ಅರಕೇರಿ ತಮ್ಮ ಇಬ್ಬರ ಮಕ್ಕಳೊಂದಿಗೆ ವಾಸಿಸುತ್ತಿದ್ದ ತಗಡಿನ ಶೆಡ್ಡಿನ ಮಣ್ಣಿನ ಗೋಡೆ ಕುಸಿದು ಬಿದ್ದಿದೆ.
ಕುವೆಂಪು ನಗರದಲ್ಲಿ ಗಾಳಿಯಿಂದ ಗಿಡ ಬಿದ್ದು, ಕಂಬಗಳಿಗೆ ಹಾನಿಯಾಗಿದ್ದು, ಕೆಇಬಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸಿಡಿಲಿಗೆ ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದ ಶಿವಪುತ್ರಪ್ಪ ತಳಕಲ್ ಎಂಬ ರೈತರಿಗೆ ಸೇರಿದ ಎತ್ತು ಮೃತಪಟ್ಟಿದೆ. ಕುಷ್ಟಗಿ ತಾಲ್ಲೂಕಿನ ತುಗ್ಗಲಗೋಣಿ ಗ್ರಾಮದ ಜಮೀನಿನಲ್ಲಿ ಅಶೋಕ ಕುಣಿಮಂಚಿ ಎಂಬ ರೈತರಿಗೆ ಸೇರಿದ ಎಮ್ಮೆ ಸಾವಿಗೀಡಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.