ಕೊಪ್ಪಳ: ನಗರದಲ್ಲಿ ಶನಿವಾರ ಜಿಲ್ಲಾ ಹಡಪದ ಸಮಾಜ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ‘ಹಡಪದ ಸಮಾಜದ ಸಾಮಾಜಿಕ ಸೇವೆ ಬಹಳಷ್ಟು ಇದೆ, ನಾವೆಲ್ಲ ಸುಂದರವಾಗಿ ಕಾಣಲು ಈ ಸಮಾಜ ಕಾರಣ. ಬಹಳ ಸೌಮ್ಯ ಸ್ವಭಾವದ ಸಮಾಜವಾಗಿದೆ, ಎಲ್ಲರೂ ಶಿಕ್ಷಣ ಪಡೆದರೆ ಸಮಾಜದಲ್ಲಿ ಇನ್ನಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ’ ಎಂದರು.
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಮಾತನಾಡಿ ‘ಹಡಪದ ಸಮಾಜದ ಜೊತೆಗೆ ಸದಾ ನಾವಿರುತ್ತೇವೆ. ಮುಂದಿನ ದಿನಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಒದಗಿಸಲು ಆದ್ಯತೆ ನೀಡಲಾಗುವುದು’ ಎಂದರು.
ಜೆಡಿಎಸ್ ರಾಜ್ಯ ಕೋರ್‌ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ ‘ಸದಾ ನಿಮ್ಮ ಸಮಾಜದ ಜೊತೆಗೆ ಇರುತ್ತೇನೆ. ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ನೀವೆಲ್ಲರೂ ಅಭಿವೃದ್ಧಿಯಾಗಬೇಕು. ನೀವು ಯಾವುದೇ ಪಕ್ಷದಲ್ಲಿದ್ದರೂ ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಆಗ ಮಾತ್ರ ಯಶಸ್ಸಿ ಸಿಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ‘ಬಸವಾದಿ ಶರಣರ ಕಾಲದಿಂದಲೂ ಹಡಪದ ಅಪ್ಪಣ್ಣ ಸಮಾಜದವರು ಅನ್ಯೋನ್ಯವಾಗಿದ್ದರೆ. ಅಪ್ಪಣ್ಣ ದೇವರು ನಿಮ್ಮ ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ’ ಎಂದು ಹಾರೈಸಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತ, ನಗರ ಹಡಪದ ಸಮಾಜ ಸಂಘದ ಸದಸ್ಯರಿಗೆ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಗವಿಸಿದ್ದಪ್ಪ ಮಾದನೂರ, ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ಅವರು ಪ್ರಮಾಣ ವಚನ ಬೋಧಿಸಿದರು,
ಜಿಲ್ಲಾ ಉಪಾಧ್ಯಕ್ಷ ಗುಂಡಪ್ಪ ವಂಕಲಕುಂಟ, ಪ್ರಧಾನ ಕಾರ್ಯದರ್ಶಿಯಾಗಿ ಗವಿಸಿದ್ದಪ್ಪ ಕಾಟ್ರಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಪ್ಪ, ಸದಸ್ಯರಾಗಿ ಮಲ್ಲಿಕಾರ್ಜುನ್ ಮಿಟ್ಟಿಕೇರಿ, ಖಜಾಂಚಿ ಮಾರಖಂಡಯ್ಯ, ಸದಸ್ಯರಾಗಿ ಈಶಪ್ಪ, ಬಸವರಾಜ, ಚಂದ್ರಶೇಖರ, ಅನ್ನಪೂರ್ಣಮ್ಮ ಪ್ರಮಾಣವಚನ ಸ್ವೀಕರಿಸಿದರು. ತಾಲ್ಲೂಕು ಸಮಿತಿಯನ್ನೂ ನೇಮಿಸಲಾಯಿತು. ಸಮಾಜದ ಮುಖಂಡರಾದ ಬಾಳಪ್ಪ ವೀರಾಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.