
ಪ
ತಾವರಗೇರಾ: ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಸಂಭ್ರಮದ ಏಕಾದಶಿ ಆಚರಿಸಲಾಯಿತು.
ಬೆಳಿಗ್ಗೆ ವೆಂಕಟೇಶ್ವರ ಮೂರ್ತಿಗೆ ತುಳಸಿ ಅಲಂಕಾರ ಪೂಜೆ ಮತ್ತು ಮಹಾ ಮಂಗಳಾರತಿ ಮಾಡಲಾಯಿತು.
ದೇವಸ್ಥಾನದಲ್ಲಿ ಭಕ್ತರು ಕುಟುಂಬ ಸಮೇತ ಆಗಮಿಸಿ ಸಾಲು ನಿಂತು ದೇವರ ದರ್ಶನ ಪಡೆದರು. ಸಂಜೆ ಭಜನೆ ಮತ್ತು ಪ್ರಸಾದ ವಿತರಣೆ, ಮಹಿಳೆಯರಿಂದ ವೆಂಕಟೇಶ್ವರ ಮೂರ್ತಿಗೆ ಆರತಿ ಪೂಜೆ ನಡೆಯಿತು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಹನಮೇಶಪ್ಪ ಖ್ಯಾಡೇದ, ಉಪಾಧ್ಯಕ್ಷ ನರಹರಿಯಪ್ಪ ದರೋಜಿ, ಮಹಿಳಾ ಸಂಘದ ಅಧ್ಯಕ್ಷ ಉಮಾ ದರೋಜಿ, ಉಪಾಧ್ಯಕ್ಷೆ ಲಕ್ಷ್ಮಿ ದರೋಜಿ ಮತ್ತು ಸಮಾಜದ ಪ್ರಮುಖರಾದ ಹುಚ್ಚಪ್ಪ ದರೋಜಿ, ಶ್ರೀನಿವಾಸ ಕಲ್ಲಮಂಗಿ, ಕುಬೇರಪ್ಪ ಖ್ಯಾಡೇದ, ಮಂಜುನಾಥ ಕಂದಗಲ್, ನಾಗರಾಜ ತೆಮ್ಮಿನಾಳ ಮತ್ತು ವಿವಿಧ ಸಮುದಾಯದ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.