ADVERTISEMENT

ಮುಸ್ಲಿಂ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 4:41 IST
Last Updated 6 ಆಗಸ್ಟ್ 2022, 4:41 IST
ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಸಲ್ಲಿಸಿದ ನಜುರುದ್ದೀನ್ ಬಿಸರಳ್ಳಿ‌ ಹಾಗೂ ರಜಿಯಾಬೇಗಂ 
ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಸಲ್ಲಿಸಿದ ನಜುರುದ್ದೀನ್ ಬಿಸರಳ್ಳಿ‌ ಹಾಗೂ ರಜಿಯಾಬೇಗಂ    

ಅಳವಂಡಿ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಅಳವಂಡಿಯ ಮುಸ್ಲಿಂ ಕುಟುಂಬವೊಂದು ಹಿಂದೂ ಸಂಸ್ಕೃತಿಯ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿತು.

ನಜುರುದ್ದೀನ್ ಬಿಸರಳ್ಳಿ‌ಹಾಗೂ ರಜಿಯಾಬೇಗಂ ದಂಪತಿ ಮೂರು ವರ್ಷಗಳಿಂದ ಈ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಈ ಸಲವೂ ಎಲ್ಲ ಹಿಂದೂ ಧಾರ್ಮಿಕ ಸಂಪ್ರದಾಯ ಪಾಲಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಸಲುವಾಗಿ ಮನೆಗೆ ದೀಪಾಲಂಕಾರ ಮಾಡಿದ್ದರು. ಹೋಳಿಗೆ ನೈವೇದ್ಯ ಮಾಡಿ ಹಾಗೂ ವಿವಿಧ ತರಹದ ಹಣ್ಣುಗಳು ಸಮರ್ಪಿಸಿ ಭಾವೈಕ್ಯ ಮೆರೆದರು.

ಮನೆಗೆ ವಿದ್ಯುತ್ ದೀಪ ಹಾಗೂ ತಳಿರುತೋರಣ ಕಟ್ಟಿ ಸಿಂಗರಿಸಲಾಗಿತ್ತು. ನಜುರುದ್ದೀನ್ ಬಿಸರಳ್ಳಿ‌ ಹಬ್ಬದ ಪ್ರಯುಕ್ತ ಎಲ್ಲಾ ಧರ್ಮಗಳ ತಮ್ಮ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದ ಊಟ ಉಣಬಡಿಸಿದರು.

ADVERTISEMENT

‘ಮೂರು ವರ್ಷಗಳ ಹಿಂದೆವರಮಹಾಲಕ್ಷ್ಮಿ ಹಬ್ಬದ ದಿನದಂದೇ ಹೊಸ ಮನೆಯ ಪ್ರವೇಶ ಮಾಡಿದ್ದೆವು. ಆಗಲೂ ಈ ಹಬ್ಬ ಆಚರಿಸಿದ್ದೆವು. ಹಿಂದೂ–ಮುಸ್ಲಿಂ ಎರಡೂ ದೇವರನ್ನು ಪೂಜಿಸುತ್ತೇವೆ. ಇದರಿಂದ ನಮ್ಮ ಜೀವನದಲ್ಲಿ ಬಹಳಷ್ಟು ಒಳ್ಳೆಯದನ್ನೇ ಕಂಡಿದ್ದೇವೆ’ ಎಂದು ನಜುರುದ್ದೀನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.