ಗಂಗಾವತಿ: ಇಲ್ಲಿನ ಹಿರೇಜಂತಕಲ್ ಸಮೀಪದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ತಹಶೀಲ್ದಾರ್ ಯು.ನಾಗರಾಜ ನೇತೃತ್ವದಲ್ಲಿ ಮಂಗಳವಾರ ಹುಂಡಿ ಹಣ ಎಣಿಕೆ ಮಾಡ ಲಾಯಿತು.
ಹುಂಡಿಯಲ್ಲಿ ₹1,05,340 (ಜ.30) ಹಣ ಸಂಗ್ರಹವಾಗಿದೆ. ಕಳೆದ ಬಾರಿ (ಮೆ.23, 2023) ಎಣಿಕೆ ಮಾಡಿದ ವೇಳೆ ₹62,770 ಹಣ ಸಂಗ್ರಹವಾಗಿತ್ತು.
ಈ ಕಾರ್ಯದ ನಂತರ ಮುಂಬರುವ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನ ಜಾತ್ರಾ ಸಿದ್ಧತೆ ಬಗ್ಗೆ ಸ್ಥಳೀಯರ ಜತೆ ಪೂರ್ವಭಾವಿ ಸಭೆ ನಡೆಸಿ, ಜಾತ್ರೆ ನೆರವೇರಿಕೆಗೆ ಬೇಕಾಗುವ ಸಿದ್ಧತೆಯ ನಿರ್ಧಾರಗಳು ಕೈಗೊಳ್ಳಲಾಯಿತು.
ಗ್ರೇಡ್- 2 ತಹಶೀಲ್ದಾರ್ ಮಹಾಂತಗೌಡ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ನಗರಠಾಣೆ ಪಿಐ ಪ್ರಕಾಶ ಮಾಳೆ, ಸ್ಥಳೀಯರಾದ ಸೋಮಪ್ಪ ಯಲಬುರ್ಗಿ, ಪರಶುರಾಮ, ಬಸವರಾಜ, ನಾಗರಾಜ, ವಿನಯ ಪಾಟಿಲ ಸೇರಿ ಅರಣ್ಯ, ಆರೋಗ್ಯ, ವಿದ್ಯುತ್, ಅಬಕಾರಿ, ಲೋಕೋಪಯೋಗಿ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಸ್ಥಳೀಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.