ADVERTISEMENT

ಹಿರೇಮ್ಯಾಗೇರಿ: ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 13:53 IST
Last Updated 23 ಸೆಪ್ಟೆಂಬರ್ 2021, 13:53 IST
ಯಲಬುರ್ಗಾ ತಾಲ್ಲೂಕು ಹಿರೇಮ್ಯಾಗೇರಿ ಗ್ರಾಮದ ಆಶ್ರಯ ಕಾಲೊನಿಯ ಜನರು ಕುಡಿಯುವ ನೀರಿಗಾಗಿ ಪಕ್ಕದ ತೋಟಕ್ಕೆ ಮುಗಿ ಬಿದ್ದಿರುವ ದೃಶ್ಯ
ಯಲಬುರ್ಗಾ ತಾಲ್ಲೂಕು ಹಿರೇಮ್ಯಾಗೇರಿ ಗ್ರಾಮದ ಆಶ್ರಯ ಕಾಲೊನಿಯ ಜನರು ಕುಡಿಯುವ ನೀರಿಗಾಗಿ ಪಕ್ಕದ ತೋಟಕ್ಕೆ ಮುಗಿ ಬಿದ್ದಿರುವ ದೃಶ್ಯ   

ಹಿರೇಮ್ಯಾಗೇರಿ (ಯಲಬುರ್ಗಾ): ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮದ ಆಶ್ರಯ ಕಾಲೊನಿಯಲ್ಲಿ ಕುಡಿವ ನೀರಿಗಾಗಿ ಅಲ್ಲಿಯ ನಿವಾಸಿಗರು ಪರದಾಡುತ್ತಿದ್ದು, ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೂ ಕಾಳಜಿ ತೋರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಸ್ತುತ ಪೂರೈಕೆಯಾಗುತ್ತಿರುವ ನೀರು ಉಪ್ಪುನೀರಾಗಿದೆ. ಅಲ್ಲದೇ ಅಧಿಕ ಪ್ಲೋರೈಡ್ ಅಂಶಗಳಿರುವುದರಿಂದ ಕುಡಿಯಲು ಯೋಗ್ಯವಿಲ್ಲ. ಅದಕ್ಕಾಗಿಯೇ ಅಲ್ಲಿಯ ನಿವಾಸಿಗರು ಅಕ್ಕಪಕ್ಕದ ತೋಟಕ್ಕೆ ಹೋಗಿ ನೀರು ಸಂಗ್ರಹಿಸುವುದು ಸಾಮಾನ್ಯವಾಗಿದೆ.

ಈ ಬಗ್ಗೆ ಪಂಚಾಯಿತಿಯವರು ಉತ್ತಮ ಕುಡಿಯುವ ನೀರು ಪೂರೈಕೆಗೆ ಮುಂದಾಗುತ್ತಿಲ್ಲ ಎಂದು ನಿವಾಸಿಗಳಾದ ಕಳಕಪ್ಪ ತಳವಾರ, ಕಳಕಮ್ಮ ಹಡಪದ, ವೀರಾಂಜನೆಯ, ನೀಲಮ್ಮ ಹಾಗೂ ಇತರರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಳೆದ ಒಂದು ವಾರದಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಆದರೂ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು‘ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರತ್ನಾ ಗುಂಡಣ್ಣವರ್ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.