ADVERTISEMENT

ನೀರಿನ ಘಟಕ ನಿರ್ವಹಣೆ ಕಡ್ಡಾಯ: ಪಿಡಿಒಗಳಿಗೆ ಸೂಚನೆ

ಪಿಡಿಒಗಳಿಗೆ ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 11:03 IST
Last Updated 19 ಜುಲೈ 2020, 11:03 IST
ಕಾರಟಗಿ ತಾಲ್ಲೂಕಿನ ಉಳೇನೂರು ಗ್ರಾಮದಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕವನ್ನು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್ ಪರಿಶೀಲಿಸಿದರು. ಅಭಿವೃದ್ದಿ ಅಧಿಕಾರಿಗಳಾದ ಮೆಹಬೂಬ, ಸುರೇಶ ಉಪ್ಪಾರ ಇದ್ದರು
ಕಾರಟಗಿ ತಾಲ್ಲೂಕಿನ ಉಳೇನೂರು ಗ್ರಾಮದಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕವನ್ನು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್ ಪರಿಶೀಲಿಸಿದರು. ಅಭಿವೃದ್ದಿ ಅಧಿಕಾರಿಗಳಾದ ಮೆಹಬೂಬ, ಸುರೇಶ ಉಪ್ಪಾರ ಇದ್ದರು   

ಕಾರಟಗಿ: ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಜತೆಗೆ ಗ್ರಾಮಗಳ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ ಪಿಡಿಒಗಳಿಗೆ ಸೂಚಿಸಿದರು.

ತಾಲ್ಲೂಕಿನ ಉಳೇನೂರು ಸಹಿತ ವಿವಿಧ ಗ್ರಾಮಗಳಿಗೆ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳೊಂದಿಗೆ ಶನಿವಾರ ಭೇಟಿ ನೀಡಿ, ನಂತರ ಮಾತನಾಡಿದರು.

ಜನರಿಗೆ ಶುದ್ಧ ಕುಡಿಯುವ ನೀರು ಸುಲಭವಾಗಿ ಸಿಗಬೇಕು ಎಂಬ ಸದುದ್ದೇಶದಿಂದ ಸರ್ಕಾರ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಮಟ್ಟದಲ್ಲಿ ಸ್ಥಾಪಿಸಿದೆ. ಇವುಗಳ ನಿರ್ವಹಣೆಯ ಜವಾಬ್ದಾರಿ ಗ್ರಾಮ ಪಂಚಾಯಿತಿ ಮಾಡಬೇಕು. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ಬೆನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಘಟಕಗಳಿದ್ದು, 4 ಕಾರ್ಯ ನಿರ್ವಹಿಸುತ್ತಿದ್ದು, 1 ನಿರ್ಮಾಣ ಹಂತದಲ್ಲಿದೆ. 3 ಖಾಸಗಿ ಘಟಕಗಳಿವೆ. ಉಳೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಖಾಸಗಿ ಘಟಕ ಇದೆ. 6 ಸರ್ಕಾರಿ ಘಟಕಗಳಲ್ಲಿ 5 ಕಾರ್ಯನಿರ್ವಹಿಸುತ್ತಿವೆ. ನೀರಿನ ಘಟಕಗಳಲ್ಲಿ ಸಮಸ್ಯೆಯಾದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜನರಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಮೆಹಬೂಬ, ಸಾಯಿನಾಥ, ಸುರೇಶ ಉಪ್ಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.