ಕಾರಟಗಿ: ‘ಯಾವುದೇ ಸಮಾಜದಲ್ಲಾಗಲಿ ಹೆಣ್ಣಿನ ಶೋಷಣೆ ಶೋಭೆಯಲ್ಲ. ಶೋಷಣೆ ಮಾಡಿದವರಿಗೆ ಮುಂದೆ ಜಯವಿಲ್ಲ’ ಎಂಬ ಸಂದೇಶವನ್ನು ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿ ಮನುಕುಲಕ್ಕೆನೀಡಿದ್ದಾರೆ.
ರಾಮರಾಜ್ಯದ ಪರಿಕಲ್ಪನೆ ಲಭ್ಯವಾಗಿದ್ದು ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಿಂದ. ಜಾತಿರಹಿತ, ವರ್ಗರಹಿತ, ಶೋಷಣೆರಹಿತ, ಸಮಪಾಲು-ಸಮಬಾಳು, ಸಮಾನ ಅವಕಾಶ ಇರುವುದೇ ರಾಮರಾಜ್ಯ’ ಎಂದು ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಲ್ಮೀಕಿ ಮಹಾಸಭೆಯ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್, ಕಾರಟಗಿ ತಾಲ್ಲೂಕು ಅಧ್ಯಕ್ಷ ಬೂದಿಗಿರಿಯಪ್ಪ, ಪ್ರಮುಖರಾದ ಶಿವರೆಡ್ಡಿ ನಾಯಕ, ನಾಗರಾಜ್ ಬಿಲ್ಗಾರ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷೆ ದೇವಮ್ಮ, ಸದಸ್ಯ ದೊಡ್ಡ ಬಸವರಾಜ್ ಬೂದಿ ಸಮಾಜದ ಪ್ರಮುಖರಾದ ಸಿ.ಗದ್ದೆಪ್ಪ ನಾಯಕ, ಸೋಮನಾಥ ಹೆಬ್ಬಡದ ವಕೀಲ, ದೇವರಾಜ್ ನಾಯಕ ಜೂರಟಗಿ, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಹುಳ್ಕಿಹಾಳ: ತಾಲ್ಲೂಕಿನ ಹುಳ್ಕಿಹಾಳ ಗ್ರಾ.ಪಂ.ಕಚೇರಿಯಲ್ಲಿ ವಾಲ್ಮೀಕಿ ಮಹರ್ಷಿ ಜಯಂತಿ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ನಾಯಕ, ಉಪಾಧ್ಯಕ್ಷ, ಕಾರ್ಯದರ್ಶಿ ಪ್ರಕಾಶ, ಸದಸ್ಯರು, ಸಿಬ್ಬಂದಿ ಹಾಜರಿದ್ದರು.
ವಾಲ್ಮೀಕಿ ವೃತ್ತ: ಪಟ್ಟಣದ 22ನೇ ವಾರ್ಡ್‌ನ ವಾಲ್ಮೀಕಿ ನಗರದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿಯ ನಾಮಫಲಕಕ್ಕೆ ಸಮಾಜದ ಮುಖಂಡರು ಪೂಜೆ ಸಲ್ಲಿಸಿದರು. ವಕೀಲ ಶಿವರೆಡ್ಡಿ ನಾಯಕ, ನಾಗರಾಜ್ ಬಿಲ್ಗಾರ್, ವಾಲ್ಮೀಕಿ ಮಹಾಸಭಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೋಮನಾಥ ಹೆಬ್ಬಡದ, ಯುವ ಮುಖಂಡ ಪ್ರಭುರಾಜ್ ಬೂದಿ, ಬಿಜೆಪಿ ಮುಖಂಡ ಬಸವರಾಜ ಎತ್ತಿನಮನಿ ಮಾತನಾಡಿದರು.
ಪ್ರಮುಖರಾದ ಶೇಖರಪ್ಪ ಗ್ಯಾರೇಜ್, ದೇವರಾಜ್ ನಾಯಕ ಜೂರಟಗಿ, ರಮೇಶ ನಾಯಕ್ ಜನೌಷಧಿ, ಶೇಖರಪ್ಪ, ಕನ್ನಯ್ಯ, ವೆಂಕಟೇಶ ಮೈಲಾಪುರ, ಶರಣಪ್ಪ ಜಾಲಿಹಾಳ, ರಮೇಶ ತೊಂಡಿಹಾಳ, ಹನುಮಂತಪ್ಪ, ವೆಂಕೋಬ ಪತ್ತಾರ, ಪಿಡಿಒ ವೆಂಕಟೇಶ, ಪ್ರದೀಪ ಕೋಲ್ಕಾರ್, ವೀರಭದ್ರಪ್ಪ ಬಡಿಗೇರ, ರಾಮಣ್ಣ, ವಿದ್ಯಾಧರಗೌಡ, ಶರಣಪ್ಪ ಕಾಯಿಗಡ್ಡಿ, ಶರಣಪ್ಪ ದಿವಟರ್, ವೆಂಕೋಬ ಪತ್ತಾರ, ನಾಗರಾಜ್ ಚನ್ನಳ್ಳಿ, ಭಗವಂತಪ್ಪ, ರವಿ ನೂತಕ್ಕಿ, ನಾಗರಾಜ್ ಭಜಂತ್ರಿ, ದೇವಪ್ಪ ಹೋಟೆಲ್, ಪಾಶಪ್ಪ, ದೇವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.