ADVERTISEMENT

ಅಪಘಾತ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 3:24 IST
Last Updated 2 ಜನವರಿ 2022, 3:24 IST

ಯಲಬುರ್ಗಾ: ಪಟ್ಟಣದ ಹೊರವಲಯದ ಸಂಗನಾಳ ರಸ್ತೆಯಲ್ಲಿ ಬೈಕ್, ಆಟೊ ನಡುವೆ ಶನಿವಾರ ನಡೆದ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ಕುಕನೂರು ತಾಲ್ಲೂಕಿನ ರಾಜೂರು ಗ್ರಾಮದ 8 ಮಹಿಳೆಯರು ಯಲಬುರ್ಗಾ ತಾಲ್ಲೂಕಿನ ಬಳೂಟಗಿ ಗ್ರಾಮಕ್ಕೆ ಕೃಷಿ ಕೆಲಸಕ್ಕೆಂದು ಹೋಗಿದ್ದರು. ಕೆಲಸ ಮುಗಿಸಿಕೊಂಡು ವಾಪಸ್‌ ಹೋಗುತ್ತಿದ್ದ ಸಂದರ್ಭದಲ್ಲಿ ಯಲಬುರ್ಗಾ ಪಟ್ಟಣದ ಬೇವೂರ ಕ್ರಾಸ್ ಹತ್ತಿರ ಸಂಭವಿಸಿದ ಅಪಘಾತದಿಂದ ಉರುಳಿ ಬಿದ್ದ ಆಟೊದಲ್ಲಿದ್ದ 8 ಜನ ಮಹಿಳೆಯರಲ್ಲಿ ಅಲ್ಲಾಬಿ ಹುಸೇನಸಾಬ ರಾಟಿಮನಿ (42) ಅವರಿಗೆ ತೀವ್ರ ಗಾಯವಾಗಿದೆ. ಹತ್ತಿರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉಳಿದ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT