ಯಲಬುರ್ಗಾ: ತಾಲ್ಲೂಕಿನ ಹಗೆದಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ವತಿಯಿಂದ ಉಚಿತ ನೋಟ್‌ಬುಕ್, ಬ್ಯಾಗ್‍ಗಳನ್ನು ವಿತರಿಸಲಾಯಿತು.
ಸಂಘಟನೆಯ ಮುಖಂಡ ಭರತ್ ರಾಮೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ದೇಣಿಗೆ ನೀಡಲಾಗಿದೆ. ಇದನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಸೌಲಭ್ಯದಲ್ಲಿ ಕೊರತೆಯಾಗಬಾರದು ಎನ್ನುವ ಕಾರಣಕ್ಕೆ ಬ್ಯಾಗ್ ನೀಡಲಾಗುತ್ತಿದೆ ಎಂದರು.
ಗ್ರಾ.ಪಂ ಸದಸ್ಯ ಕಳಕನಗೌಡ ಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ದುರಗಪ್ಪ ನಡುಲಮನಿ, ಸದಸ್ಯರಾದ ಬಸನಗೌಡ ಗೌಡ, ಹನಮಪ್ಪ ಕುರಿ, ತಾಲ್ಲೂಕು ಕರವೇ ಅಧ್ಯಕ್ಷ ಮಂಜುನಾಥ ತಳವಾರ, ಗ್ರಾಮ ಘಟಕ ಅಧ್ಯಕ್ಷ ಶಶಿಕುಮಾರ ಮಂಡಲಗೇರಿ, ಮುಖಂಡರಾದ ಬಾಳಪ್ಪ ತಳವಾರ, ಶಂಕ್ರಪ್ಪ ತಳವಾರ, ರಾಮಣ್ಣ ಸಿಂಧೆ, ಯಮನೂರಪ್ಪ ಮಂಡಲಗೇರಿ, ಯಮನೂರಪ್ಪ ಕೋಡಿಹಾಳ, ಗುಂಡಪ್ಪ ತಳವಾರ, ಶಿಕ್ಷಕರಾದ ಯಮನೂರಪ್ಪ ಪ್ರಭಣ್ಣನವರ್, ರಾಘವೇಂದ್ರ ಕುದ್ರಿ, ಬಾಳಪ್ಪ ಮುಗಳಿ, ಶ್ರೀದೇವಿ ಚಕ್ರಸಾಲಿ, ರವಿ ಹೊರಪೇಟೆ, ಕರಿಯಪ್ಪ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.