ADVERTISEMENT

ತರಲಕಟ್ಟಿ: ‘ಶೈಕ್ಷಣಿಕ ಸಾಧನೆಗೆ ಸಹಕಾರಿಯಾಗಲಿ’

ಓಸಟಾ ಸಂಸ್ಥೆಯಿಂದ ಕೊಠಡಿಗಳ ಕೊಡುಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 4:32 IST
Last Updated 27 ಜೂನ್ 2022, 4:32 IST
ಯಲಬುರ್ಗಾ ತಾಲ್ಲೂಕು ತರಲಕಟ್ಟಿ ಗ್ರಾಮದಲ್ಲಿ ನಡೆದ ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು
ಯಲಬುರ್ಗಾ ತಾಲ್ಲೂಕು ತರಲಕಟ್ಟಿ ಗ್ರಾಮದಲ್ಲಿ ನಡೆದ ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು   

ಯಲಬುರ್ಗಾ: ‘ಮಕ್ಕಳ ಶೈಕ್ಷಣಿಕ ಸುಧಾರಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಓಸಾಟ್ ಸಂಸ್ಥೆಯ ಕೊಡುಗೆ ಶ್ಲಾಘನೀಯ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ನಡೆದ ಓಸಾಟ್ ಸಂಸ್ಥೆ ನಿರ್ಮಿಸಿಕೊಟ್ಟ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಅಭ್ಯಾಸ ಮಾಡಿ ಸಾಧನೆ ಮಾಡಲಿ ಎನ್ನುವ ಉದ್ದೇಶದಿಂದಓಸಾಟ್ ಸಂಸ್ಥೆ ಶಾಲಾ ಕಟ್ಟಡ ನಿರ್ಮಿಸಿದೆ. ಅವರ ಕಳಕಳಿ ಮೆಚ್ಚುವಂಥದ್ದು ಎಂದರು.

ADVERTISEMENT

ಓಸಾಟ್ ಶೈಕ್ಷಣಿಕ ಧರ್ಮದತ್ತಿ ಕಂಪನಿಯ ಮುಖ್ಯಸ್ಥ ಬಾಲಕೃಷ್ಣರಾವ್ ಮಾತನಾಡಿ,‘₹42 ಲಕ್ಷ ವೆಚ್ಚದಲ್ಲಿ ನಾಲ್ಕು ಕೊಠಡಿಗಳ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಮಕ್ಕಳಿಗೆ ಅನುಕೂಲವಾದರೆ ನಮ್ಮ ಕಾರ್ಯ ಸಾರ್ಥಕ’ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಸಂಸ್ಥೆಯ ಅಧಿಕಾರಿ ಎ.ಗೋಪಾಲ ಮಾತನಾಡಿದರು. ಡಿಡಿಪಿಐ ಮುತ್ತು ರಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಗಣ್ಯರಾದ ರಂಗನಾಥ ವಲ್ಮಕೊಂಡಿ, ವೀರಣ್ಣ ಹುಬ್ಬಳ್ಳಿ ಹಾಗೂ ಚಂದ್ರಕಾಂತಯ್ಯ ತೇಜನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.