ಯಲಬುರ್ಗಾ: ಪಟ್ಟಣದ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡವನ್ನು ರಾಜ್ಯ ಹೈಕೋರ್ಟ್ ನ್ಯಾಯಾಧೀಶೆ ಪಿ.ಸುಧಾ ಅವರು ಭೇಟಿ ನೀಡಿ ಪರಿಶೀಲಿಸಿದರು.
ವಿಶಾಲವಾಗಿ ನಿರ್ಮಾಣಗೊಂಡಿರುವ ಕಟ್ಟಡದ ತುಂಬೆಲ್ಲ ಸುತ್ತಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶೀಘ್ರದಲ್ಲಿಯೇ ಉದ್ಘಾಟನೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಹೇಳಿದರು.
‘ಸುಮಾರು 28 ನ್ಯಾಯಾಧೀಶರು ನೂರಾರು ಸಂಖ್ಯೆಯ ವಕೀಲರನ್ನು ನಾಡಿಗೆ ನೀಡಿದ ಕೀರ್ತಿ ಯಲಬುರ್ಗಾ ತಾಲ್ಲೂಕಿಗೆ ಸಲ್ಲುತ್ತದೆ. ತಾಲ್ಲೂಕಿನ ಕೆ.ಎಸ್. ಸ್ವಾಮಿ ಅವರು ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದು ಖುಷಿ ವಿಚಾರ. ಈ ಎಲ್ಲ ಕಾರಣಗಳಿಂದ ಈ ಪ್ರದೇಶಕ್ಕೆ ವಿಶೇಷ ಇತಿಹಾಸವಿದೆ ಎಂಬುದು ಮನವರಿಕೆಯಾಗಿದೆ’ ಎಂದರು.
ವಕೀಲರ ಸಂಘದ ಅಧ್ಯಕ್ಷ ಸುಭಾಸ ಹೊಂಬಳ ಮಾತನಾಡಿ,‘ನೂತನ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕೆಲಸವನ್ನು ತ್ವರಿತವಾಗಿ ಮುಕ್ತಾಯಗೊಳ್ಳಲಿದೆ. ಹಾಗೆಯೇ ವಕೀಲರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದರು.
ದಿವಾಣಿ ನ್ಯಾಯಾಧೀಶರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಮೀಸಲಾತಿ ಕಲ್ಪಿಸುವುದು, ವಕೀಲರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದು, ನೂತನ ನ್ಯಾಯಾಲಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೋರಿದರು.
ಸಂಘದ ಕಾರ್ಯದರ್ಶಿ ಮಹಾಂತೇಶ ಟಿ. ಮಾತನಾಡಿ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸೂಕ್ತ ವಾತಾವರಣ ಯಲಬುರ್ಗಾ ಕೋರ್ಟ್ ಹೊಂದಿರುವುದರಿಂದ ಈ ಬಗ್ಗೆ ವಿವಿಧ ಹಂತದ ಗೌರವಾನ್ವಿತ ನ್ಯಾಯಾಧೀಶರುಗಳು ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರಕೈಗೊಳ್ಳಬೇಕು ಮನವಿ ಮಾಡಿದರು.
ಹಿರಿಯ ವಕೀಲ ಸಿ.ಎಸ್. ಬನಪ್ಪಗೌಡ ಸೇರಿ ಅನೇಕರು ಮಾತನಾಡಿದರು. ವಕೀಲರ ಸಂಘದ ವತಿಯಿಂದ ಹೈಕೋರ್ಟ್ ನ್ಯಾಯಮೂರ್ತಿ ಪಿ.ಸುಧಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಸ್ಥಳೀಯ ಹಿರಿಯ ಶ್ರೇಣಿ ನ್ಯಾಯಾಧೀಶ ಜೆ.ರಂಗಸ್ವಾಮಿ, ಕಿರಿಯಶ್ರೇಣಿ ನ್ಯಾಯಾಧೀಶ ಸಂಜೀವಕುಮಾರ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರ ಸಂಘದ ಪದಾಧಿಕಾರಿಗಳಾದ ಎಂ.ಎಸ್.ನಾಯ್ಕರ್, ಹಸನಸಾಬ ನದಾಫ್, ಹಿರಿಯ ವಕೀಲರಾದ ಬಿ.ಎಂ. ಶಿರೂರ, ಉಮೇಶ ಮೆಣಸಗೇರಿ, ಪಿ.ಎಸ್. ಬೇಲೇರಿ, ಸಿ.ಪಿ.ಪಾಟೀಲ, ಪಿ.ಎಸ್. ಹಿರೇಮಠ, ಅಕ್ಕಮಹಾದೇವಿ ಪಾಟೀಲ, ಇಂದ್ರಾ ಉಳ್ಳಾಗಡ್ಡಿ, ಉಮಾ ಕಲ್ಲೂರ, ಸಾವಿತ್ರಿ ಗೊಲ್ಲರ, ಲಕ್ಷ್ಮಿ ನಾಯಕ, ಜ್ಯೋತಿ ಹಾಳಕೇರಿ, ಎಂ.ಎಸ್. ಪಾಟೀಲ ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.